Skandagiri Scam: ಸ್ಕಂದಗಿರಿ ಟಿಕೆಟ್ ಬುಕ್ಕಿಂಗ್‌ನಲ್ಲಿ ಭಾರೀ ಅಕ್ರಮ; ಆಡಿಯೋ ವೈರಲ್ ಬೆನ್ನಲ್ಲೇ ಸಿಐಡಿ ತನಿಖೆ ? ಇಲ್ಲಿದೆ ವೈರಲ್‌ ಆಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Skandagiri Scam: ಸ್ಕಂದಗಿರಿ ಟಿಕೆಟ್ ಬುಕ್ಕಿಂಗ್‌ನಲ್ಲಿ ಭಾರೀ ಅಕ್ರಮ; ಆಡಿಯೋ ವೈರಲ್ ಬೆನ್ನಲ್ಲೇ ಸಿಐಡಿ ತನಿಖೆ ? ಇಲ್ಲಿದೆ ವೈರಲ್‌ ಆಡಿಯೋ

Skandagiri Scam: ಸ್ಕಂದಗಿರಿ ಟಿಕೆಟ್ ಬುಕ್ಕಿಂಗ್‌ನಲ್ಲಿ ಭಾರೀ ಅಕ್ರಮ; ಆಡಿಯೋ ವೈರಲ್ ಬೆನ್ನಲ್ಲೇ ಸಿಐಡಿ ತನಿಖೆ ? ಇಲ್ಲಿದೆ ವೈರಲ್‌ ಆಡಿಯೋ

Published Jul 24, 2024 05:23 PM IST Praveen Chandra B
twitter
Published Jul 24, 2024 05:23 PM IST

  • ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಕಂದಗಿರಿ ಬೆಟ್ಟದ ಚಾರಣ ಟಿಕೆಟ್ ಬುಕ್ಕಿಂಗ್ ನಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರತೀ ದಿನ ಇಲ್ಲಿಗೆ 2 ಸ್ಲಾಟ್ ನಲ್ಲಿ 300 ಜನ ಪ್ರವಾಸಿಗರಿಗೆ ಮಾತ್ರ ಪ್ರವೇಶ ನಿಗದಿಪಡಿಸಲಾಗಿದ್ದು, ಟಿಕೆಟ್ ದರ ತಲಾ 600 ರೂಪಾಯಿ ಇದೆ. ಆದರೆ ಈ ಆನ್ ಲೈನ್ ಸೈಟನ್ನ ನಿಭಾಯಿಸುತ್ತಿದ್ದ ಖಾಸಗೀ ಕಂಪನಿಯ ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾಗಿರೋದು ಸ್ಪಷ್ಟವಾಗಿದೆ. ಟಿಕೆಟ್ ಬುಕ್ಕಿಂಗ್ ಕ್ಲೋಸ್ ಆದ ಬಳಿಕ ಅಕ್ರಮವಾಗಿ ಪ್ರವಾಸಿಗರಿಂದ ಹಣ ವಸೂಲಿ ಮಾಡಿ ಚಾರಣಕ್ಕೆ ಅವಕಾಶ ನೀಡುತ್ತಿದ್ದರು. ಇದಕ್ಕೆ ಮೊದಲೇ ಚಾರಣಕ್ಕೆ ಬಳಕೆಯಾದ ಟಿಕೆಟ್ ಗಳನ್ನ ನೀಡುತ್ತಿದ್ದು, ಗೂಗಲ್ ಪೇ ಮೂಲಕ ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಬೆಂಗಳೂರು ಟ್ರಕ್ಕಿಂಗ್ ಕಮ್ಯುನಿಟಿ ದೂರು ನೀಡಿದ ಅನ್ವಯ ಸಿಬ್ಬಂದಿಯನ್ನ ಕೆಲಸದಿಂದ ತೆಗೆದುಹಾಕಲಾದ್ದು, ಇದರ ಬೆನ್ನಲ್ಲೇ ಅಕ್ರಮದ ಬಗ್ಗೆ ಆಡಿಯೋ ಫುಲ್ ವೈರಲ್ ಆಗಿದೆ.

More