ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಚಿಕ್ಕಮಗಳೂರಿನ ಪ್ರಸಿದ್ಧ ಚಾರಣ ತಾಣ ದೇವರಮನೆ ಬೆಟ್ಟದಲ್ಲಿ ಡಿಜೆ ಡ್ಯಾನ್ಸ್, ಪ್ರವಾಸಿಗರಿಗೆ ಕಿರಿಕಿರಿ- ವೈರಲ್ ವಿಡಿಯೋ

ಚಿಕ್ಕಮಗಳೂರಿನ ಪ್ರಸಿದ್ಧ ಚಾರಣ ತಾಣ ದೇವರಮನೆ ಬೆಟ್ಟದಲ್ಲಿ ಡಿಜೆ ಡ್ಯಾನ್ಸ್, ಪ್ರವಾಸಿಗರಿಗೆ ಕಿರಿಕಿರಿ- ವೈರಲ್ ವಿಡಿಯೋ

Jul 03, 2024 06:23 PM IST Umesh Kumar S
twitter
Jul 03, 2024 06:23 PM IST

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಚಾರಣ ತಾಣ ದೇವರಮನೆ ಬೆಟ್ಟ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸದ್ಯ ಮಳೆ ಮತ್ತು ಹಿಮದ ವಾತಾವರಣವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಾರಾಂತ್ಯದಲ್ಲಿ ಪ್ರವಾಸಿಗರು ಬರ್ತಾ ಇದ್ದಾರೆ. ಆದರೆ ಕೆಲವು ಯುವಕರು ನಡು ರಸ್ತೆಯಲ್ಲಿ ಡಿಜೆ ಡ್ಯಾನ್ಸ್ ಮಾಡುವುದರಿಂದ ಇತರೆ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಬಂದಿರೋದ್ರಿಂದ ಕೆಲವರು ಮದ್ಯಪಾನ ಕೂಡ ಮಾಡಿ ಬಂದಿರುವ ಆರೋಪವಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಸಂಬಂಧ ಪಟ್ಟವರು ನಿಗಾ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

More