ಚೀನಾದಲ್ಲಿ ಹೆಚ್‌ಎಂಪಿ ವೈರಸ್ ಪರಿಸ್ಥಿತಿ ಹೇಗಿದೆ, ಧಾರವಾಡದ ಶಶಿ ಶಿರುಗುಪ್ಪಿ ಅವರಿಂದ ಸತ್ಯ ದರ್ಶನ
ಕೆಲವು ದಿನಗಳಿಂದ ಹೆಚ್‌ಎಂಪಿ ವೈರಸ್ ವಿಚಾರ ಭಾರೀ ಸದ್ದು ಮಾಡುತ್ತಿದೆ, ಜನರು ಆತಂಕದಲ್ಲಿದ್ದಾರೆ, ಮತ್ತೆ ಲಾಕ್‌ಡೌನ್ ಆಗುತ್ತಾ, ಈ ವೈರಸ್ ಕೂಡಾ ಮಾರಣಾಂತಿಕವಾಗಲಿದ್ಯಾ ಎಂಬ ಗಂಭೀರ ಚರ್ಚೆ ನಡೆಯುತ್ತಿದೆ. ಕೆಲವೆಡೆ ಈ ವಿಚಾರವಾಗಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಆದರೆ ಮಂಗಳವಾರ ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿ,ಇದು ಭಯಪಡುವಂಥ ವೈರಸ್ ಅಲ್ಲ ಎಂದಿದ್ದರು. ಇದೀಗ ಸ್ವತಃ ಚೀನಾದಲ್ಲಿ ವಾಸಿಸುತ್ತಿರುವ ಧಾರವಾಡದ ಶಶಿ ಶಿರುಗುಪ್ಪಿ ಎಂಬುವವರು ಅಲ್ಲಿನ ಸತ್ಯತೆಯನ್ನು ವಿವರಿಸಿದ್ದಾರೆ. ಇಲ್ಲಿ ಎಚ್ಎಂಪಿ ವೈರಸ್ ಯಾವುದೇ ಆತಂಕ ಸೃಷ್ಟಿ ಮಾಡಿಲ್ಲ. ಇಲ್ಲಿ ಜನಜೀವನ ಮಾಮೂಲಿನಂತೆ ಇದೆ, ಏನೂ ಭಯ ಪಡಬೇಡಿ, ಆರಾಮವಾಗಿರಿ ಎಂದು ಹೇಳಿದ್ದಾರೆ.