CT Ravi : ಸಿಟಿ ರವಿ ಪ್ರಕರಣ ಬೆಳೆಸುವುದು ಸಿಎಂ, ಹೋಂ ಮಿನಿಸ್ಟರ್‌ಗೆ ಇಷ್ಟವಿರಲಿಲ್ಲ; ಕೇಂದ್ರ ಸಚಿವ ವಿ ಸೋಮಣ್ಣ ಹೇಳಿಕೆ ಸಂಚಲನ, ವಿಡಿಯೋ
CT Ravi Case: ಬಿಜೆಪಿ ಎಂಎಲ್‌ಸಿ ಸಿಟಿ ರವಿ ಪ್ರಕರಣವನ್ನು ಬೆಳೆಸುವುದು ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಇಷ್ಟ ಇರಲಿಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಪರೋಕ್ಷವಾಗಿ ಹೇಳಿದ್ದಾರೆ. ಸಿಟಿ ರವಿ ಪ್ರಕರಣವನ್ನು ಕೈ ಬಿಡುವಂತೆ ಇತರೆ ನಾಯಕರು ಕಾಂಗ್ರೆಸ್ ಪ್ರಭಾವಿ ನಾಯಕರಿಗೆ ಆಗ್ರಹಿಸಿದ್ದರು. ಪ್ರಕರಣ ನಡೆದ ದಿನ ಸಿಟಿ ರವಿ ಅವರ ಜತೆಗೆ ಮಾಧ್ಯಮ ಪ್ರತಿನಿಧಿಗಳು ಇಲ್ಲದಿದ್ದರೆ ಕಥೆ ಏನಾಗುತ್ತಿತ್ತು ಎಂದು ಊಹಿಸಿ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲದಲ್ಲೇ ಈ ರೀತಿಯ ದ್ವೇಷದ ರಾಜಕಾರಣ ಶುರುವಾಗಿರುವುದು ಬೇಸರ ತಂದಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ.