ಅವರು ನನ್ನನ್ನು ಹೀರೋ ಎಂದು ಕರೆಯುತ್ತಿದ್ದರು; ಅಭಿನಯ ಶಾರದೆ ಜಯಂತಿ ನೆನೆದ ಸಿಎಂ ಸಿದ್ದರಾಮಯ್ಯ
ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ ಅಭಿನಯ ಶಾರದೆ ಜಯಂತಿ ಇಂದು ನಮ್ಮೊಂದಿಗೆ ಇಲ್ಲ. ನಾಯಕಿಯಾಗಿ, ಪೋಷಕ ನಟಿಯಾಗಿ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಮಿಂಚಿದ ಅದ್ಭುತ ಕಲಾವಿದೆ ಜಯಂತಿ ಅವರನ್ನು ಸಿಎಂ ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸದಾಶಿವ ಶೆಣೈ ಬರೆದಿರುವ ಅಭಿನಯ ಶಾರದೆ ಜಯಂತಿ ಅವರ ಜೀವನಗಾಥೆ "Lovely But lonely" ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಈ ಸಮಯದಲ್ಲಿ ಜಯಂತಿ ಅವರೊಂದಿಗಿನ ಒಡನಾಟವನ್ನು ಸಿದ್ದರಾಮಯ್ಯ ನೆನಪಿಸಿಕೊಂಡರು, ಜಯಂತಿ ಅವರು ನನ್ನನನ್ನು ಪ್ರೀತಿಯಿಂದ ಹೀರೋ ಎಂದು ಕರೆಯುತ್ತಿದ್ದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.