ಮಂಗಳೂರಿನ ಅದ್ಯಪಾಡಿ ಆದಿನಾಥೇಶ್ವರನ ಪ್ರಾರ್ಥಿಸಿದ್ರೆ ಅಸ್ತಮಾದಿಂದ ಗುಣಮುಖ; ಕರಾವಳಿ ದೇಗುಲದ ಕುರಿತು ಹೀಗೊಂದು ನಂಬಿಕೆ
- ಕರಾವಳಿಯಲ್ಲಿ ದೈವ ದೇವರುಗಳಿಗೆ ಇನ್ನಿಲ್ಲದ ವಿಶೇಷ ಸ್ಥಾನ ಇದೆ. ಇಲ್ಲಿ ಸಾಕಷ್ಟು ರೋಗ ರುಜಿನಗಳಿಗೆ ಪರಿಹಾರ ನೀಡಬಲ್ಲ ದೇವಸ್ಥಾನಗಳು ಇವೆ. ಅಂತಹ ಪ್ರಮುಖ ದೇವಸ್ಥಾನಗಳಲ್ಲಿ ಮಂಗಳೂರಿನ ಬಜ್ಪೆ ಬಳಿ ಇರುವ ಅದ್ಯಪಾಡಿಯ ಆದಿನಾಥೇಶ್ವರ ದೇವಸ್ಥಾನ ಕೂಡ ಒಂದು. ಇಲ್ಲಿ ಎಷ್ಟೇ ಗಂಭೀರ ಅಸ್ತಮಾ ಸಮಸ್ಯೆ ಇದ್ದರೂ ಕೂಡ ಪ್ರಾರ್ಥನೆ ಮಾಡಿದರೆ, ಇಲ್ಲಿ ಕೊಡುವ ಗಂಧವನ್ನ ನಿರ್ದಿಷ್ಟ ಸಮಯದವರೆಗೆ ಸೇವಿಸಿದರೆ ಅಸ್ತಮಾ ಹೇಳ ಹೆಸರಿಲ್ಲದಂತೆ ಹೋಗುತ್ತದೆ ಎನ್ನುವ ನಂಬಿಕೆಯಿದೆ. ಅಸ್ತಮಾ ನಿವಾರಣೆಯಾದ ಬಳಿಕ ಕೇವಲ ಕುಂಬಳಕಾಯಿ, ಹಗ್ಗ, ಕರಿಮೆಣಸು ಮತ್ತು ಗಂಧದ ಚಕ್ಕೆಗಳನ್ನು ಹರಕೆ ರೂಪದಲ್ಲಿ ಕೊಟ್ಟರೆ ದೇವರ ಆಶೀರ್ವಾದ ಸಿಗುತ್ತದೆ ಎಂದು ಆಸ್ತಿಕರು ಹೇಳಿದ್ದಾರೆ.