ದಕ್ಷಿಣ ಕನ್ನಡ: ಕೋಟೆಕಾರ್‌ ಬ್ಯಾಂಕ್‌ ಲೂಟಿ ಮಾಡಿದ ದರೋಡೆಕೋರರಿಂದ 18 ಕಿಲೋ ಚಿನ್ನಾಭರಣ ವಶ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದಕ್ಷಿಣ ಕನ್ನಡ: ಕೋಟೆಕಾರ್‌ ಬ್ಯಾಂಕ್‌ ಲೂಟಿ ಮಾಡಿದ ದರೋಡೆಕೋರರಿಂದ 18 ಕಿಲೋ ಚಿನ್ನಾಭರಣ ವಶ

ದಕ್ಷಿಣ ಕನ್ನಡ: ಕೋಟೆಕಾರ್‌ ಬ್ಯಾಂಕ್‌ ಲೂಟಿ ಮಾಡಿದ ದರೋಡೆಕೋರರಿಂದ 18 ಕಿಲೋ ಚಿನ್ನಾಭರಣ ವಶ

Published Jan 28, 2025 03:03 PM IST Rakshitha Sowmya
twitter
Published Jan 28, 2025 03:03 PM IST

ಇತ್ತೀಚೆಗೆ ಮಂಗಳೂರು ಬಳಿಯ ಉಳ್ಳಾಲ ಠಾಣೆ ವ್ಯಾಪ್ತಿಯ ಕೆಸಿ ರಸ್ತೆಯಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ದರೋಡೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು 3.80 ಲಕ್ಷ ರೂ ನಗದು ಹಾಗೂ ಸುಮಾರು 18 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್ ಟಿಡಿ ನಾಗರಾಜ್ ಮತ್ತು ಸೂರತ್ಕಲ್ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ನೇತೃತ್ವದ 14 ಮಂದಿಯ ತಂಡ ತಮಿಳುನಾಡಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಮುರುಗನ್ ಮನೆಯಿಂದ 4 ಬ್ಯಾಗ್‌ನಲ್ಲಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸುಮಾರು 6 ತಿಂಗಳ ಹಿಂದೆಯೇ ದರೋಡೆಗೆ ಸಂಚು ರೂಪಿಸಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

More