ದಕ್ಷಿಣ ಕನ್ನಡ: ಬಂದೂಕು ತೋರಿಸಿ ಉಲ್ಲಾಳ ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆ ಮಾಡಿದ ಮುಸುಕುಧಾರಿಗಳು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದಕ್ಷಿಣ ಕನ್ನಡ: ಬಂದೂಕು ತೋರಿಸಿ ಉಲ್ಲಾಳ ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆ ಮಾಡಿದ ಮುಸುಕುಧಾರಿಗಳು

ದಕ್ಷಿಣ ಕನ್ನಡ: ಬಂದೂಕು ತೋರಿಸಿ ಉಲ್ಲಾಳ ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆ ಮಾಡಿದ ಮುಸುಕುಧಾರಿಗಳು

Jan 17, 2025 06:56 PM IST Rakshitha Sowmya
twitter
Jan 17, 2025 06:56 PM IST

ದಕ್ಷಿಣ ಕನ್ನಡ: ಬೀದರ್‌ ಎಟಿಎಂನಲ್ಲಿ ಹಣ ತುಂಬಿಸುವಾಗ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣ ದರೋಡೆ ಮಾಡಿದ ಬೆನ್ನಲ್ಲೇ ಇಂದು (ಜ 17) ಉಲ್ಲಾಳದ ಕೆಸಿ ರಸ್ತೆಯ ಬ್ಯಾಂಕ್‌ವೊಂದರಲ್ಲಿ ಹಗಲು ದರೋಡೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಉಲ್ಲಾಳದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಶಾಖೆಯಲ್ಲಿ ಶುಕ್ರವಾರ ಮಧ್ಯಾಹ್ನ ಮುಸುಕು ಧರಿಸಿ ಬಂದ ಐವರು ಬಂದೂಕು , ತಲ್ವಾರ್‌ ತೋರಿಸಿ ಸುಮಾರು 10 ಕೋಟಿ ರೂಗೂ ಹೆಚ್ಚು ಬೆಲೆ ಬಾಳುವ ಚಿನ್ನಾಭರಣ ಹಾಗೂ 5 ಲಕ್ಷ ರೂ ಹಣವನ್ನು ದೋಚಿ, ಕಾರಿನಲ್ಲಿ ಪರಾರಿಯಾಗಿದ್ದಾರೆ. ಬ್ಯಾಂಕಿನಲ್ಲಿ ದರೋಡೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಮಂಗಳೂರಿಗೆ ಭೇಟಿ ನೀಡಿದ ದಿನವೇ ಈ ದರೋಡೆ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. 

More