Coral snake: ಚಿಕ್ಕಮಗಳೂರಿನಲ್ಲಿ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆ; ಕೋರಲ್ ಸ್ನೇಕ್ ಹೀಗಿದೆ ನೋಡಿ
- ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ ಕಲ್ಮಕ್ಕಿ ಗ್ರಾಮದ ನಿವಾಸಿಯಾದ ಸ್ನೇಕ್ ರಿಜ್ವಾನ್ ಅವರ ಮನೆ ಬಳಿ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ರಿಜ್ವಾನ್, ಇದು ಅಪರೂಪದ ಮತ್ತು ವಿಷಕಾರಿ ಹಾವುಗಳಲ್ಲಿ ಒಂದಾದ ಕೋರಲ್ ಸ್ನೇಕ್, ಹವಳದ ಹಾವು ಎಂದು ಗುರುತಿಸಿಕೊಂಡಿದೆ. ಮಲೆನಾಡಲ್ಲಿ ಹಪ್ಪಟೆ ಹಾವು ಹಾಗು ರಕ್ತ ಕನ್ನಡಿ ಹಾವು ಎಂದೇ ಪ್ರಚಲಿತ. ಇದು ಅತ್ಯಂತ ವಿಷಕಾರಿ. ಆದರೆ ಈ ಹಾವು ಕಚ್ಚಿ ಸತ್ತವರ ಪ್ರಕರಣ ಕಡಿಮೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಹೆಚ್ಚೇ ಬಾಗಿರುವ ಕಾರಣ ಇದು ಕಚ್ಚುವ ಸಂದರ್ಭದಲ್ಲಿ ವಿಷ ದೇಹಕ್ಕೆ ಸೇರುವುದು ಕಡಿಮೆ. ಪಶ್ಚಿಮಘಟ್ಟದಲ್ಲಿ ಈ ಹಾವು ಕಂಡುಬರುತ್ತವೆ. ವಿಶೇಷವೆಂದರೆ ಹಾವಿನ ಕೆಳಭಾಗ ಕೆಂಪುಬಣ್ಣ ದಲ್ಲಿದ್ದು ಗಮನ ಸೆಳೆಯುತ್ತವೆ ಎನ್ನುತ್ತಾರೆ