ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಡ್ಡಿಗ್ಯಾಂಗ್‌ ಸದಸ್ಯನನ್ನು ಬಂಧಿಸಿದ ಹುಬ್ಬಳ್ಳಿಯ ವಿದ್ಯಾಗಿರಿ ಪೊಲೀಸರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಡ್ಡಿಗ್ಯಾಂಗ್‌ ಸದಸ್ಯನನ್ನು ಬಂಧಿಸಿದ ಹುಬ್ಬಳ್ಳಿಯ ವಿದ್ಯಾಗಿರಿ ಪೊಲೀಸರು

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಡ್ಡಿಗ್ಯಾಂಗ್‌ ಸದಸ್ಯನನ್ನು ಬಂಧಿಸಿದ ಹುಬ್ಬಳ್ಳಿಯ ವಿದ್ಯಾಗಿರಿ ಪೊಲೀಸರು

Dec 30, 2024 11:11 PM IST Rakshitha Sowmya
twitter
Dec 30, 2024 11:11 PM IST

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಚಡ್ಡಿಗ್ಯಾಂಗ್‌ ಸದಸ್ಯನೊಬ್ಬನನ್ನು ಹುಬ್ಬಳ್ಳಿಯ ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ. 6 ತಿಂಗಳ ಹಿಂದೆ ಚಡ್ಡಿ ಗ್ಯಾಂಗ್‌ನ ನಾಲ್ವರು ಹುಬ್ಬಳ್ಳಿ ಧಾರವಾಡದ ನವಲೂರಿನ ಅಶೋಕ್‌ ಕದಂ ಎಂಬುವವರ ಮನೆ ಬಾಗಿಲಿಗೆ ದೊಡ್ಡ ಗಾತ್ರದ ಕಲ್ಲಿನಿಂದ ಒಡೆದು ಒಳಗೆ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿ ಪರಾರಿಯಾಗಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ರಾಯಪುರದ ಬಳಿ ಆರೋಪಿ ವೆಂಕಟೇಶ್ವರ ರಾವ್‌ಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಆತ ಆಂಧ್ರ ಪ್ರದೇಶದ ಮೂಲದವನೆಂದು ತಿಳಿದುಬಂದಿದೆ. ಪೊಲೀಸರ ವಶದಲ್ಲಿರುವ ಆರೋಪಿ ಮೂಲಕ ಗ್ಯಾಂಗ್‌ನ ಇತರ ಸದಸ್ಯರನ್ನೂ ಅರೆಸ್ಟ್‌ ಮಾಡಲು ಪೊಲೀಸರು ಮುಂದಾಗಿದ್ದಾರೆ.

More