MS Dhoni Candy Crush: ವಿಮಾನದಲ್ಲಿ ಕ್ಯಾಂಡಿಕ್ರಶ್ ಆಡಿದ ಎಂ ಎಸ್ ಧೋನಿಯ ವಿಡಿಯೋ ವೈರಲ್ ; ಟ್ರೆಂಡ್ ಹುಟ್ಟುಹಾಕಿದ ಮಾಹಿ
- ಮಹೇಂದ್ರ ಸಿಂಗ್ ಧೋನಿ ಅವರು ಏನು ಮಾಡಿದರೂ ಟ್ರೆಂಡ್ ಆಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ ಕ್ಯಾಂಡಿ ಕ್ರಶ್ ಆಡ್ತಿರುವ ಒಂದು ಪೋಟೋ ಸಾಮಾಜಿಕ ಜಾಲತಾಣವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಇತ್ತೀಚೆಗೆ ಧೋನಿ ತಮ್ಮ ಪತ್ನಿ ಸಾಕ್ಷಿಯೊಂದಿಗೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಗಗನಸಖಿಯೊಬ್ಬರು ಚಾಕೋಲೇಟ್ ನೀಡಿ ಸರ್ಪ್ರೈಸ್ ನೀಡಿದರು. ಆದರೆ, ಈ ವೇಳೆ ಧೋನಿ, ಕ್ಯಾಂಡಿ ಕ್ರಶ್ ಆಡುತ್ತಿದ್ದರು. ಟ್ಯಾಬ್ಲೆಟ್ನಲ್ಲಿ ಸ್ಪಷ್ಟವಾಗಿ ಕಾಣ್ತಿತ್ತು. ಇದನ್ನ ಗಮನಿಸಿರುವ ಧೋನಿ ಅಭಿಮಾನಿಗಳೂ ತಾವೂ ಗೇಮನ್ನ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕ್ಯಾಂಡಿ ಕ್ರಶ್ ಸಾಗ ಇಂಡಿಯಾ ಟ್ವಿಟ್ ಮಾಡಿದೆ. ಈ ಕುರಿತು ಮಾಡಿದ ಪೋಸ್ಟ್ನಲ್ಲಿ 'ಜಸ್ಟ್ ಇನ್- ಕೇವಲ 3 ಗಂಟೆಗಳಲ್ಲಿ 3.6 ಮಿಲಿಯನ್ ಹೊಸದಾಗಿ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಹೇಳಿದೆ.