ರೋಡ್ ರೇಜ್ ಜಗಳವನ್ನು ಭಾಷೆಯ ಗಲಾಟೆಗೆ ತಿರುಗಿಸಿ ವಿಂಗ್ ಕಮಾಂಡರ್ ಹೈ ಡ್ರಾಮಾ? ಸಿಸಿ ಕ್ಯಾಮರಾದಲ್ಲಿ ಕಂಡಿದ್ದಿಷ್ಟು
- ರಾಜಧಾನಿ ಬೆಂಗಳೂರಿನಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ನಿನ್ನೆ ಯುವಕನೊಬ್ಬ ಭಾಷೆಯ ವಿಚಾರವಾಗಿ ತನಗೆ ಮನಸೋ ಇಚ್ಛೆ ಥಳಿಸಿದ್ದಾನೆ ಎಂದು ಡಿಆರ್‌ಡಿಓ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಂಬುವರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಜೊತೆಗೆ ವಿಕಾಸ್ ಎಂಬ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು. ಆದರೆ ಬಳಿಕ ವಿಡಿಯೋವೊಂದು ವೈರಲ್ ಆಗಿದ್ದು ಇದರಲ್ಲಿ ಸ್ವತಃ ವಿಂಗ್ ಕಮಾಂಡರ್ ಯುವಕನನ್ನ ಥಳಿಸಿರುವುದು ಬೆಳಕಿಗೆ ಬಂದಿದೆ. ತಾನೇ ಮನಸೋ ಇಚ್ಛೆ ಯುವಕನ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಬಳಿಕ ಭಾಷೆಯ ನಾಟಕ ಆಡಿರುವ ಆರೋಪ ಅಧಿಕಾರಿಯ ವಿರುದ್ಧ ವ್ಯಕ್ತವಾಗಿದೆ.