ದರ್ಶನ್ ಮೇಲಿನ ಸಿಟ್ಟನ್ನ ನನ್ನ ಸಿನಿಮಾ ಮೇಲೆ ತೋರಿಸ್ತಾ ಇದ್ದಾರೆ; ರಾಯಲ್ ಸಿನಿಮಾ ಬಗ್ಗೆ ದಿನಕರ್‌ ತೂಗುದೀಪ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದರ್ಶನ್ ಮೇಲಿನ ಸಿಟ್ಟನ್ನ ನನ್ನ ಸಿನಿಮಾ ಮೇಲೆ ತೋರಿಸ್ತಾ ಇದ್ದಾರೆ; ರಾಯಲ್ ಸಿನಿಮಾ ಬಗ್ಗೆ ದಿನಕರ್‌ ತೂಗುದೀಪ ಪ್ರತಿಕ್ರಿಯೆ

ದರ್ಶನ್ ಮೇಲಿನ ಸಿಟ್ಟನ್ನ ನನ್ನ ಸಿನಿಮಾ ಮೇಲೆ ತೋರಿಸ್ತಾ ಇದ್ದಾರೆ; ರಾಯಲ್ ಸಿನಿಮಾ ಬಗ್ಗೆ ದಿನಕರ್‌ ತೂಗುದೀಪ ಪ್ರತಿಕ್ರಿಯೆ

Jan 25, 2025 06:17 PM IST Manjunath B Kotagunasi
twitter
Jan 25, 2025 06:17 PM IST

  • "ನಮಸ್ಕಾರ.. ತುಂಬ ಖುಷಿಯಾಯ್ತು,, ಫ್ಯಾಮಿಲಿ ಜತೆಗೆ ಬಂದು ಸಿನಿಮಾ ನೋಡಿದ್ದು. ಬೆಳಗ್ಗೆಯಿಂದ ವಿಮರ್ಶೆಗಳನ್ನು ಚೆಕ್‌ ಮಾಡ್ತಿದ್ದೇವೆ. ಎಲ್ಲರಿಂದಲೂ ರಿಪೋರ್ಟ್‌ ಕೇಳ್ತಿದ್ದೇವೆ. ಎಲ್ಲರೂ ಸೂಪರ್‌ ಎನ್ನುತ್ತಿದ್ದಾರೆ. ಆದರೆ, ಬುಕ್‌ ಮೈ ಶೋನಲ್ಲಿ ಕೆಲವರು ಸುಮ್‌ ಸುಮ್ನೆ ನೆಗೆಟಿವ್‌ ರಿವ್ಯೂವ್‌ ಹಾಕ್ತಿದ್ದಾರೆ. ಬರೀ ಒಂದೊಂದು ಸ್ಟಾರ್‌ ಕೊಡ್ತಿದ್ದಾರೆ. ಬೇಕು ಬೇಕು ಅಂತ ತುಂಬ ಜನ ಪ್ರಯತ್ನಪಡ್ತಿದ್ದಾರೆ. ನೀವು ಸಪೋರ್ಟ್‌ ಮಾಡಿದರೆ, ಅವರದ್ದು ಏನೇ ಪ್ರಯತ್ನ ಇದ್ದರೂ ನಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ನೀವು ಗೆಲ್ಲಿಸುತ್ತಿರಿ ಅನ್ನೋ ನಂಬಿಕೆ ಇದೆ. ನಮ್ಮ ಸೆಲೆಬ್ರಿಟೀಸ್‌ ನೀವು. "ತುಂಬ ಜನ ಪ್ರಯತ್ನ ಪಡ್ತಿದ್ದಾರೆ. ಅದ್ಯಾಕೆ ಅಂತ ಗೊತ್ತಿಲ್ಲ. ದರ್ಶನ್‌ ಮೇಲಿರುವ ಕೋಪವನ್ನು ನನ್ನ ಮೇಲೆ ತೀರಿಸಿಕೊಳ್ತಿದ್ದಾರೆ. ಇಂಥ ಹೊತ್ತಲ್ಲಿ ನೀವುಗಳು ನಮಗೆ ಸಪೋರ್ಟ್‌ ಮಾಡಬೇಕು. ನೀವು ನಮ್ಮ ಜೊರತೆ ಇರೋವರೆಗೂ ನಮಗೆ ಆನೆ ಬಲ ಇದ್ದಂಗೆ. ನಾವು ಧೈರ್ಯವಾಗಿ ಮುಂದೆ ನಿಂತಿರ್ತೀವಿ. ಅವರು ಏನೇ ಪ್ರಯತ್ನಪಟ್ಟರೂ ಅವರನ್ನು ಗೆಲ್ಲಿಸಲು ಬಿಡಲ್ಲ ಎಂಬುದೂ ಗೊತ್ತು. ನಮ್ಮ ಬೆನ್ನ ಹಿಂದೆ ನಿಂತಿದ್ದೀರಾ. ನಮ್ಮನ್ನು ಗೆಲ್ಲಿಸುತ್ತೀರಾ ಅನ್ನೋ ಆತ್ಮವಿಶ್ವಾಸ ಇದೆ. ಎಲ್ಲರಿಗೂ ಧನ್ಯವಾದ" ಎಂದಿದ್ದಾರೆ ದಿನಕರ್‌ ತೂಗುದೀಪ. ‌

More