Dr G Parameshwar on Prajwal Revanna : ಪ್ರಜ್ವಲ್ ಗೆ ಕೇಂದ್ರವೇ ರಾಜತಾಂತ್ರಿಕ ಪಾಸ್ ಪೋರ್ಟ್ ನೀಡಿ ಕಳುಹಿಸಿದೆ
ಪೆನ್ ಡ್ರೈವ್ ವಿಡಿಯೋ ಪ್ರಕರಣದಲ್ಲಿ ಹೆಚ್ ಡಿ ರೇವಣ್ಣ ವಿಚಾರಣೆಗೆ ಬರದೇ ಇದ್ದರೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಇವತ್ತು ಅವರು ಅಧಿಕಾರಿಗಳ ಮುಂದೆ ಹಾಜರಾಗಬೇಕಿತ್ತು. ಆದರೆ ಕಾಲಾವಕಾಶ ಕೇಳುವ ಸಾಧ್ಯತೆ ಇದ್ದು ಅದಕ್ಕೆ ಅವಕಾಶವಿಲ್ಲ. ಅವರು ಇನ್ನೂ ಕೂಡ ವಿಚಾರಣೆಗೆ ಬರದೇ ಇದ್ದರೆ ಅಧಿಕಾರಿಗಳು ಬಂಧಿಸಬೇಕಾದ ಪರಿಸ್ಥಿತಿ ಬರಬಹುದು ಎಂದಿದ್ದಾರೆ. ಇನ್ನು ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಕೇಂದ್ರವೇ ಡಿಪ್ಲಾಮ್ಯಾಟಿಕ್ ವೀಸಾವನ್ನ ಕೊಟ್ಟಿದ್ದು, ಪ್ರಜ್ವಲ್ ರೇವಣ್ಣ ಬೇರೆ ದೇಶಕ್ಕೂ ಹೋಗಲು ಅವಕಾಶವಿದೆ. ಹೀಗಾಗಿ ಅವರಿಗೂ ಆದಷ್ಟು ಬೇಗ ಹಾಜರಾಗಲು ಸೂಚಿಸಿದ್ದೇವೆ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.