Ratha Saptami: ರಥ ಸಪ್ತಮಿ ಅಂಗವಾಗಿ ಹುಬ್ಬಳ್ಳಿ, ಮೈಸೂರಿನಲ್ಲಿ 108 ಸೂರ್ಯ ನಮಸ್ಕಾರ - ವಿಡಿಯೋ ನೋಡಿ
- ಹುಬ್ಬಳ್ಳಿಯಲ್ಲಿ ರಥ ಸಪ್ತಮಿ ಅಂಗವಾಗಿ ವಿಶೇಷ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು. ಸುಮಾರು 500 ಮಂದಿ ಯೋಗ ಪಟುಗಳು ಸೇರಿ 108 ಬಾರಿ ಸೂರ್ಯ ನಮಸ್ಕಾರ ಹಾಕಿದರು. ಬಳಿಕ ವಿಶೇಷ ಹೋಮವನ್ನೂ ನಡೆಸಲಾಯ್ತು. ಇತ್ತ ಮೈಸೂರಿನಲ್ಲೂ ಮೈಸೂರು ಯೋಗ ಒಕ್ಕೂಟ ರಥಸಪ್ತಮಿ ಅಂಗವಾಗಿ 108 ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಮಂದಿ ಸೂರ್ಯ ನಮಸ್ಕಾರ ಹಾಕಿದರು.