Gujarat Floods: ಗುಜರಾತ್ನಲ್ಲಿ ಭೀಕರ ಮಳೆ, 17 ಸಾವು, 11 ಮಂದಿ ನಾಪತ್ತೆ; ದ್ವೀಪವಾದ ದ್ವಾರಕಾ, ಕಚ್, ಅಹ್ಮದಾಬಾದ್
- Heavy Rain fall at Gujarat: ಗುಜರಾತ್ನಲ್ಲಿ ಸುರಿಯುತ್ತಿರುವ ಭಾರಿ ಮಳೆ ಭೀಕರ ಅನಾಹುತ ಸೃಷ್ಟಿಸಿದೆ. ಅಹಮದಾಬಾದ್, ಕಚ್ ಹಾಗೂ ದ್ವಾರಕಾದಲ್ಲಿ ಸುರಿದ ಮಳೆ ದ್ವೀಪವನ್ನೇ ನಿರ್ಮಿಸಿದೆ. ಸ್ಥಳೀಯರು ಮನೆಯಿಂದ ಹೊರ ಬರಲಾರದ ಸ್ಥಿತಿ ಉಂಟಾಗಿದ್ದು, ನಿನ್ನೆ ರಾತ್ರಿವರೆಗೂ 17 ಸಾವು, 11 ಮಂದಿ ನಾಪತ್ತೆಯಾಗಿದ್ದಾರೆ. ಅದರ ಸಂಖ್ಯೆ ಏರಿರಬಹುದು ಎನ್ನಲಾಗಿದೆ. ಜಲಾಶಯಗಳು ಭೋರ್ಗರೆಯುತ್ತಿದ್ದು, ಮಹಾರಾಷ್ಟ್ರದ ಮೇಲೂ ಪರಿಣಾಮ ಬೀರಿದೆ.