H.D. Kumaraswamy: ಹೆಚ್ ಡಿ ಕುಮಾರಸ್ವಾಮಿ ಮಂಡ್ಯದಿಂದ ಅಖಾಡಕ್ಕೆ ಬಹುತೇಕ ಫಿಕ್ಸ್ ; ಸುಮಲತಾ ಬೆಂಬಲ?
ಸಾಕಷ್ಟು ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಮೈತ್ರಿ ಬಳಗದಿಂದ ಅಭ್ಯರ್ಥಿ ಯಾರು ಎಂಬುದಕ್ಕೆ ಉತ್ತರ ಸಿಕ್ಕಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರೇ ಬಹುತೇಕ ಅಖಾಡಕ್ಕಿಳಿಯುವುದು ಕನ್ಫರ್ಮ್ ಆಗಿದೆ. ಸುಮಲತಾ ಅವರ ಪೈಪೋಟಿಯ ನಡುವೆಯೂ ಬಿಜೆಪಿ ನಾಯಕರ ಮುಂದೆ ಪಟ್ಟು ಹಿಡಿದಿದ್ದ ಹೆಚ್ ಡಿಕೆ ಅಂತಿಮವಾಗಿ ತಾವೇ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.