ಪೊಲೀಸರ ಸೋಗಿನಲ್ಲಿ ಬಸ್‌ನಲ್ಲಿ ಸಾಗಿಸುತ್ತಿದ್ದ 61 ಲಕ್ಷ ಮೌಲ್ಯದ ಬಂಗಾರ ದೋಚಿದ್ದ ಖದೀಮರ ಬಂಧನ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪೊಲೀಸರ ಸೋಗಿನಲ್ಲಿ ಬಸ್‌ನಲ್ಲಿ ಸಾಗಿಸುತ್ತಿದ್ದ 61 ಲಕ್ಷ ಮೌಲ್ಯದ ಬಂಗಾರ ದೋಚಿದ್ದ ಖದೀಮರ ಬಂಧನ Video

ಪೊಲೀಸರ ಸೋಗಿನಲ್ಲಿ ಬಸ್‌ನಲ್ಲಿ ಸಾಗಿಸುತ್ತಿದ್ದ 61 ಲಕ್ಷ ಮೌಲ್ಯದ ಬಂಗಾರ ದೋಚಿದ್ದ ಖದೀಮರ ಬಂಧನ VIDEO

Published Mar 20, 2025 07:38 PM IST Manjunath B Kotagunasi
twitter
Published Mar 20, 2025 07:38 PM IST

  • ಪೊಲೀಸರಂತೆ ನಟಿಸಿ ಬಸ್‌ನಲ್ಲಿ ಸಾಗಾಟ ಮಾಡುತ್ತಿದ್ದ 61 ಲಕ್ಷದ ಮೌಲ್ಯದ ಬಂಗಾರದ ಒಡವೆಯನ್ನು ಲಪಟಾಯಿಸಿದ ಖದೀಮರು ಅಂದರ್ ಆಗಿದ್ದಾರೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನಲ್ಲಿ ನಾಲ್ಕು ಜನ ಬಂಗಾರ ಕೆಲಸ ಮಾಡುವ ಕೆಲಸಗಾರರು 806 ಗ್ರಾಂ ಬಂಗಾರ ತೆಗೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಖಾಸಗಿ ಬಸ್‌ನಲ್ಲಿ ಬಂಗಾರದ ಆಭರಣಗಳನ್ನು ಕೊಂಡೊಯ್ತುತ್ತಿದ್ದ ಕೆಲಸಗಾರರು. ಈ ವೇಳೆ ತೆಲಗಿ ಗ್ರಾಮದ ಬಳಿ ಬಸ್ ತಡೆದು, ನಾವು ದಾವಣಗೆರೆಯ ಕ್ರೈಂ ಬ್ರಾಂಚ್ ಪೊಲೀಸರು ಎಂದು ಹೇಳಿ ತಪಾಸಣೆ ಮಾಡಿದ್ದರು. ಅಲ್ಲದೆ ಬಂಗಾರದ ಒಡವೆಗಳನ್ನು ಪಡೆದು ದಾಖಲೆ ತೋರಿಸಿ ಸ್ಟೇಷನ್ ನಲ್ಲಿ ಕಲೆಕ್ಟ್ ಮಾಡಿ ಎಂದು ಹೇಳಿ ಹೋಗಿದ್ದರು. ಕೂಡಲೇ ಕೆಲಸಗಾರರು ಅನುಮಾನಗೊಂಡು ಹರಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು‌ನೀಡಿದ್ದು, ಮಾಲು ಸಹಿತ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

More