ಹಾಸನ ಜನಕಲ್ಯಾಣ ಸಮಾವೇಶದ ನೇರ ಪ್ರಸಾರ: ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಸೇರಿ ವಿವಿಧ ಕಾಂಗ್ರೆಸ್‌ ನಾಯಕರು ಭಾಗಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹಾಸನ ಜನಕಲ್ಯಾಣ ಸಮಾವೇಶದ ನೇರ ಪ್ರಸಾರ: ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಸೇರಿ ವಿವಿಧ ಕಾಂಗ್ರೆಸ್‌ ನಾಯಕರು ಭಾಗಿ

ಹಾಸನ ಜನಕಲ್ಯಾಣ ಸಮಾವೇಶದ ನೇರ ಪ್ರಸಾರ: ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಸೇರಿ ವಿವಿಧ ಕಾಂಗ್ರೆಸ್‌ ನಾಯಕರು ಭಾಗಿ

Dec 05, 2024 01:28 PM IST Rakshitha Sowmya
twitter
Dec 05, 2024 01:28 PM IST

ಹಾಸನ: ಇತ್ತೀಚೆಗೆ ನಡೆದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. 3 ಕ್ಷೇತ್ರಗಳನ್ನೂ ಗೆದ್ದಿರುವ ಕಾಂಗ್ರೆಸ್‌ ಈಗ ಜೆಡಿಎಸ್‌ ಭದ್ರಕೋಟೆ ಎಂದೇ ಹೆಸರಾದ ಹಾಸನದಲ್ಲಿ ಜನಕಲ್ಯಾಣ ಸಮಾವೇಶ ನಡೆಸುತ್ತಿದೆ. ಅರಸೀಕೆರೆ ರಸ್ತೆಯ ಎಸ್‌.ಎಂ. ಕೃಷ್ಣ ಬಡಾವಣೆಯಲ್ಲಿ ಈ ಸಮಾವೇಶ ನಡೆಯುತ್ತಿದೆ. ಸಮಾವೇಶಕ್ಕೆ ಬೃಹತ್‌ ವೇದಿಕೆ ನಿರ್ಮಿಸಲಾಗಿದ್ದು ಸುಮಾರು 480 ಅಡಿ ಅಗಲ, 600 ಅಡಿ ಉದ್ದದ ಸ್ಥಳದಲ್ಲಿ ಟೆಂಟ್‌ ನಿರ್ಮಿಸಲಾಗಿದೆ. ಸುಮಾರು 70 ಸಾವಿರ ಜನರು ಕೂರಲು ಆಸನದ ವ್ಯವಸ್ಥೆ ಮಾಡಲಾಗಿದೆ. 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಹಾಸನದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ಜನಕಲ್ಯಾಣ ಸಮಾವೇಶ ನೇರಪ್ರಸಾರ ಇಲ್ಲಿದೆ.

More