ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆ; ಕೆಆರ್‌ಎಸ್ ಡ್ಯಾಂ ಭರ್ತಿ, ಪಾರ್ಕಿಂಗ್ ವರೆಗೂ ಉಕ್ಕಿದ ನೀರು
- ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯ ತುಂಬಿ ತುಳುಕುತ್ತಿದೆ. ಮಡಿಕೇರಿ ಮತ್ತು ಮೈಸೂರು ಭಾಗದಲ್ಲಿ ಸತತವಾಗಿ ವರುಣ ಆರ್ಭಟಿಸಿದ್ದು, ಕಾವೇರಿ ಕೊಳ್ಳ, ಉಪನದಿಗಳು ಭರ್ತಿಯಾಗಿವೆ. ಹೀಗಾಗಿ ಕೆಆರ್‌ಎಸ್ ನಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಬೃಂದಾವನ ಗಾರ್ಡನ್‌ಗೆ ಕೆಆರ್‌ಎಸ್‌ನ ನೀರು ನುಗ್ಗಿದ್ದು ಪಾರ್ಕಿಂಗ್ ಲಾಟ್ ಮತ್ತು ಅಂಗಡಿ ಮುಗ್ಗಟ್ಟುಗಳಿಗೆ ವ್ಯಾಪಿಸಿದೆ. ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಿ ವ್ಯಾಪಾರ ವಹಿವಾಟು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.