Kannada News  /  Video Gallery  /  Helicopter Carrying Yediyurappa Faced Difficulty For Landing In Kalaburagi District

BS Yediyurappa: ಮಾಜಿ ಸಿಎಂ ಬಿಎಸ್ ವೈ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲು ಪರದಾಟ! ವಿಡಿಯೋ

07 March 2023, 20:22 IST Raghavendra M Y
07 March 2023, 20:22 IST

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲು ಪರದಾಡಿದ ಘಟನೆ ಕಲಬುರಗಿಯ ಜೇವರ್ಗಿಯಲ್ಲಿ ನಡೆದಿದೆ. ಲ್ಯಾಂಡಿಂಗ್ ವೇಳೆ ಹೆಲಿಪ್ಯಾಡ್ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಚೀಲಗಳು ಮೇಲೆದ್ದು ಗಿರಿಕಿ ಹೊಡಿದ ಪರಿಣಾಮ ಪೈಲಟ್ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡದೆ ವಾಪಸ್ ಹೋಗುವ ಮೂಲಕ ಅನಾಹುತವನ್ನು ತಪ್ಪಿಸಿದ್ದಾರೆ. ಹೆಲಿಪ್ಯಾಡ್ ಬಳಿ ಇದ್ದ ಪ್ಲಾಸ್ಟಿಕ್ ಚೀಲಗಳನ್ನು ತೆರವುಗೊಳಿಸಿದ ಬಳಿಕ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲಾಗಿದೆ. ಜೇವರ್ಗಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪಯಾತ್ರೆಯಲ್ಲಿ ಭಾಗವಹಿಸಲು ಬಿಎಸ್ವೈ ವಿಶೇಷ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದರು.

More