ಮಂಡ್ಯ ಬಾಲಕಿಯ ಸಾವು ಕೇಸ್; ಅವೈಜ್ಞಾನಿಕವಾಗಿ ವಾಹನ ತಡೆಯಬೇಡಿ, ಪೊಲೀಸರಿಗೆ ಗೃಹ ಸಚಿವರ ಖಡಕ್ ಸೂಚನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಂಡ್ಯ ಬಾಲಕಿಯ ಸಾವು ಕೇಸ್; ಅವೈಜ್ಞಾನಿಕವಾಗಿ ವಾಹನ ತಡೆಯಬೇಡಿ, ಪೊಲೀಸರಿಗೆ ಗೃಹ ಸಚಿವರ ಖಡಕ್ ಸೂಚನೆ

ಮಂಡ್ಯ ಬಾಲಕಿಯ ಸಾವು ಕೇಸ್; ಅವೈಜ್ಞಾನಿಕವಾಗಿ ವಾಹನ ತಡೆಯಬೇಡಿ, ಪೊಲೀಸರಿಗೆ ಗೃಹ ಸಚಿವರ ಖಡಕ್ ಸೂಚನೆ

Published May 27, 2025 03:39 PM IST Umesh Kumar S
twitter
Published May 27, 2025 03:39 PM IST

ಮಂಡ್ಯ ಸ್ವರ್ಣಸಂದ್ರದಲ್ಲಿ ಟ್ರಾಫಿಕ್ ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದ 3 ವರ್ಷದ ಮಗುವಿನ ಮೇಲೆ ಬೇರೆ ವಾಹನ ಹಾದು ಹೋಗಿ, ಆಕೆಯ ಪ್ರಾಣ ಹೋದ ಘಟನೆ ಸೋಮವಾರ ಬೆಳಿಗ್ಗೆ ನಡೆದಿತ್ತು. ಪೊಲೀಸರ ಅವೈಜ್ಞಾನಿಕ ತಪಾಸಣೆ ಕಾರಣ ದುರಂತ ನಡೆಯಿತು ಎಂದು ಪೊಲೀಸರ ವಿರುದ್ಧ ಬಾಲಕಿಯ ಕುಟುಂಬಸ್ಥರು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಈ ನಡುವೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಇದರ ಬೆನ್ನಲ್ಲೇ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ವಾಹನ ಸವಾರರನ್ನ ತಪಾಸಣೆಗೆ ಸುಖಾ ಸುಮ್ಮನೆ ಅವೈಜ್ಞಾನಿಕವಾಗಿ ತಡೆಯಬಾರದು. ಒಮ್ಮೆಲೇ ಓಡಿ ಬಂದು ತಡೆಯುವುದರಿಂದ ಅಪಘಾತಗಳು ಸಂಭವಿಸುತ್ತವೆ. ಬದಲಾಗಿ ಇದಕ್ಕೆ ಪೂರಕವಾದ ಮಾರ್ಗದರ್ಶಿ ಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಇಂದು ಪೊಲೀಸ್ ಇಲಾಖೆಯ ಮುಖ್ಯಸ್ಥರನ್ನ ಸಭೆ ಕರೆಯಲಾಗಿದ್ದು ಕೆಲವು ಸೂಚನೆಗಳನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

More