HD Kumaraswamy Prajwal revanna : ಪ್ರಜ್ವಲ್ ಪೆನ್ ಡ್ರೈವ್ ವಿಡಿಯೋ ಹಿಂದೆ ಡಿಕೆ ಶಿವಕುಮಾರ್ ಕೈವಾಡ..!
- ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಹಾಸನದ ಪೆನ್ ಡ್ರೈವ್ ವಿಚಾರ ಈಗ ರಾಜಕೀಯ ತಿರುವುಗಳನ್ನ ಪಡೆದಿದ್ದು, ಪರಸ್ಪರ ಕೆಸರೆರಚಾಟ ನಡೆಯುತ್ತಿದೆ. ಒಂದೆಡೆ ಇದರ ತನಿಖೆ ಚುರುಕುಗೊಳ್ಳುತ್ತಿದ್ದಂತೆ, ಈ ಪೆನ್ ಡ್ರೈವ್ ವಿಡಿಯೋ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ ಎಂದು ಕುಮಾರಸ್ವಾಮಿ ನೇರವಾಗಿ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಕೈವಾಡ ಇರೋದನ್ನ ಮರೆಮಾಚಲು ಕಾರಿನ ಡ್ರೈವರ್ ನಿಂದ ಹೇಳಿಕೆ ಕೊಡಿಸಲಾಗಿದ್ದು, ದಿಕ್ಕು ತಪ್ಪಿಸುತ್ತಿದ್ದಾರೆ. ಐದಾರು ವರ್ಷಗಳ ಹಿಂದಿನ ವಿಡಿಯೋ ಈಗ ಚುನಾವಣೆ ಹೊಸ್ತಿಲಲ್ಲಿ ಬಿಡುಗಡೆಯಾಗೋದಕ್ಕೆ ಕಾರಣ ಏನು ಅನ್ನೋದು ಸ್ಪಷ್ಟ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.