PM Modi Speech Live; ಪ್ರಕೃತಿ ವಿಕೋಪಗಳು ಕಳವಳ ಹೆಚ್ಚಿಸಿವೆ; 78ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ಕಾಳಜಿ - ನೇರ ಪ್ರಸಾರ
Independence Day 2024 Updates; ದೇಶದಲ್ಲಿ ನಡೆದ ಪ್ರಕೃತಿ ವಿಕೋಪಗಳು ಕಳವಳ ಉಂಟುಮಾಡಿವೆ. ಇದು ಕಾಳಜಿಯಿಂದ ಗಮನಿಸಬೇಕಾದ ವಿಚಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಇಂದು (ಆಗಸ್ಟ್ 15) ನವದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ನೈಸರ್ಗಿಕ ವಿಕೋಪಗಳು ಕಳೆದ ಕೆಲವು ವರ್ಷಗಳಿಂದ ನಮ್ಮ ಕಳವಳವನ್ನು ಹೆಚ್ಚಿಸಿವೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಪ್ರಕೃತಿ ವಿಕೋಪದಿಂದ ಹಲವಾರು ಮಂದಿ ತಮ್ಮ ಕುಟುಂಬ, ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಹೊರ ರಾಷ್ಟ್ರವೂ ನಷ್ಟ ಅನುಭವಿಸಿದೆ. ಇಂದು, ನಾನು ಅವರೆಲ್ಲರಿಗೂ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಈ ಬಿಕ್ಕಟ್ಟಿನ ಸಮಯದಲ್ಲಿ ಇಡೀ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.