ಜಮ್ಮು ಕಾಶ್ಮೀರದ ದೋಡಾದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆ; ಹುತಾತ್ಮರಾದರು ಕ್ಯಾಪ್ಟನ್ ಬ್ರಿಜೇಶ್ ಥಾಪಾ ಸೇರಿ ನಾಲ್ವರು ಯೋಧರು- ವೈರಲ್‌ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜಮ್ಮು ಕಾಶ್ಮೀರದ ದೋಡಾದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆ; ಹುತಾತ್ಮರಾದರು ಕ್ಯಾಪ್ಟನ್ ಬ್ರಿಜೇಶ್ ಥಾಪಾ ಸೇರಿ ನಾಲ್ವರು ಯೋಧರು- ವೈರಲ್‌ ವಿಡಿಯೋ

ಜಮ್ಮು ಕಾಶ್ಮೀರದ ದೋಡಾದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆ; ಹುತಾತ್ಮರಾದರು ಕ್ಯಾಪ್ಟನ್ ಬ್ರಿಜೇಶ್ ಥಾಪಾ ಸೇರಿ ನಾಲ್ವರು ಯೋಧರು- ವೈರಲ್‌ ವಿಡಿಯೋ

Published Jul 16, 2024 09:32 PM IST Umesh Kumar S
twitter
Published Jul 16, 2024 09:32 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರ ಜತೆಗಿನ ಭೀಕರ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಥಾಪಾ ಸೇರಿ 4 ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಮೂಲದ ನಿಷೇಧಿತ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರೊಂದಿಗಿನ ಭೀಕರ ಗುಂಡಿನ ಚಕಮಕಿ ನಡೆದಾಗ ಯೋಧರು ಹುತಾತ್ಮರಾದರು. 

ಹುತಾತ್ಮ ಯೋಧರನ್ನು ಡಾರ್ಜಿಲಿಂಗ್‌ನ ಕ್ಯಾಪ್ಟನ್ ಬ್ರಿಜೇಶ್ ಥಾಪಾ, ಆಂಧ್ರಪ್ರದೇಶದ ನಾಯಕ್ ಡೊಕ್ಕರಿ ರಾಜೇಶ್ ಮತ್ತು ಸಿಪಾಯಿಗಳಾದ ರಾಜಸ್ಥಾನದ ಬಿಜೇಂದ್ರ ಮತ್ತು ಅಜಯ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ದೋಡಾ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಎನ್‌ಕೌಂಟರ್ ನಡೆದಿತ್ತು.

More