Nirmala Sitharaman: ಸದನದಲ್ಲೇ ಜಯಲಲಿತಾ ಸೀರೆ ಎಳೆದಿದ್ದ ನೀವು ದ್ರೌಪದಿಯ ಬಗ್ಗೆ ಮಾತಾಡ್ತೀರಾ; ನಿರ್ಮಲಾ ಸೀತಾರಾಮನ್
- Nirmala Sitharaman: ಮಹಿಳಾ ಭದ್ರತೆ ಬಗ್ಗೆ ಸಂಸತ್ನಲ್ಲಿ ಮಾತನಾಡಿದ ಪ್ರತಿಪಕ್ಷಗಳ ವಿರುದ್ಧ ಸಚಿವೆ ನಿರ್ಮಲಾ ಸೀತರಾಮನ್ ಭರ್ಜರಿಯಾಗಿ ಉತ್ತರ ಕೊಟ್ಟಿದ್ದಾರೆ. ಮಣಿಪುರದ ಘಟನೆಯನ್ನ ಮಹಾಭಾರತ ಹಾಗೂ ದ್ರೌಪದಿಗೆ ಹೋಲಿಸಿದ ಸಂಸದೆ ಕನಿಮೋಳಿಯವರನ್ನ ತರಾಟೆಗೆ ತೆರೆದುಕೊಂಡ ಸೀತಾರಾಮನ್, 1989ರಲ್ಲಿ ತಮಿಳುನಾಡಿನಲ್ಲಿ ನಡೆದ ವಿಧಾನಸಭೆ ಅಧಿವೇಶನದ ವೇಳೆ ಜಯಲಲಿತಾ ಅವರ ಮೇಲೆ ಡಿಎಂಕೆ ಶಾಸಕರು ಹಲ್ಲೆ ನಡೆಸಿ ಸೀರೆ ಎಳೆದಿದ್ದರು. ಈ ಘಟನೆಯನ್ನ ನೀವು ಮರೆತಿದ್ದೀರಾ.. ಮಹಿಳೆಯರಿಗೆ ಈ ರೀತಿ ಮರ್ಯಾದೆ ಕೊಡುವ ನೀವು ದ್ರೌಪದಿ ಬಗ್ಗೆ ಹೇಗೆ ಮಾತಾಡ್ತೀರಿ ಎಂದು ಪ್ರಶ್ನಿಸಿದರು. ಸದನದಲ್ಲಿ ಅಂದು ಆದ ಈ ಅವಮಾನಕ್ಕೆ ಪ್ರತಿಜ್ಞೆ ಮಾಡಿದ್ದ ಜಯಲಲಿತಾ, ಇನ್ನು ಈ ಸದನಕ್ಕೆ ಬರೋದಿದ್ದರೆ, ಅದು ಸಿಎಂ ಆಗಿ ಮಾತ್ರ ಎಂದು ಹೇಳಿದ್ದರು. ಅದರಂತೆ 2 ವರ್ಷಗಳಲ್ಲಿ ಜಯಲಲಿತಾ ಸಿಎಂ ಆಗಿ ಮರಳಿದ್ದರು.