Pongal 2025: ಪೊಂಗಲ್‌ ಹಬ್ಬಕ್ಕೆ ಭರ್ಜರಿ ತಯಾರಿ; ಕಬ್ಬು ಕಟಾವು ಆರಂಭಿಸಿದ ತಮಿಳುನಾಡು ರೈತರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Pongal 2025: ಪೊಂಗಲ್‌ ಹಬ್ಬಕ್ಕೆ ಭರ್ಜರಿ ತಯಾರಿ; ಕಬ್ಬು ಕಟಾವು ಆರಂಭಿಸಿದ ತಮಿಳುನಾಡು ರೈತರು

Pongal 2025: ಪೊಂಗಲ್‌ ಹಬ್ಬಕ್ಕೆ ಭರ್ಜರಿ ತಯಾರಿ; ಕಬ್ಬು ಕಟಾವು ಆರಂಭಿಸಿದ ತಮಿಳುನಾಡು ರೈತರು

Jan 08, 2025 03:30 PM IST Rakshitha Sowmya
twitter
Jan 08, 2025 03:30 PM IST

ಜನವರಿ 14 ರಂದು ಸಂಕ್ರಾಂತಿ ಆಚರಿಸಲಾಗುತ್ತಿದೆ. ಈಗಾಗಲೇ ಜನರು ಹಬ್ಬಕ್ಕೆ ಬೇಕಾದ ತಯಾರಿ ಮಾಡುತ್ತಿದ್ದಾರೆ, ಅವಶ್ಯಕವಿರುವ ಸಾಮಗ್ರಿಗಳ ಶಾಪಿಂಗ್‌ ಜೋರಾಗಿದೆ. ತಮಿಳುನಾಡಿನಲ್ಲಿ ಸಂಕ್ರಾಂತಿಯನ್ನು ಪೊಂಗಲ್‌ ಹೆಸರಿನಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೊಸ ಬೆಳೆಯಿಂದ 3 ದಿನಗಳ ಕಾಲ ಈ ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ. ತಮಿಳುನಾಡು ರೈತರು ಹಬ್ಬಕ್ಕಾಗಿ ಕಬ್ಬು ಕಟಾವು ಆರಂಭಿಸಿದ್ದಾರೆ. ತಮಿಳು ಭಾಷೆಯಲ್ಲಿ ಪೊಂಗು ಎಂದರೆ ಕುದಿಯುವುದು ಎಂದು ಅರ್ಥ. ಹಬ್ಬದ ದಿನ ಎಲ್ಲರ ಮನೆಯಲ್ಲಿ ಹಾಲು, ಬೆಲ್ಲ, ಅಕ್ಕಿ ಬಳಸಿ ಮಡಿಕೆಯಲ್ಲಿ ಸಿಹಿ ಪೊಂಗಲ್‌ ತಯಾರಿಸುತ್ತಾರೆ. ಹಾಲಿನ ಉಕ್ಕಿ ಹರಿಯುವಿಕೆಯು ಸಮೃದ್ಧಿಯ ಸಂಕೇತವಾಗಿದೆ. ಜನರು ಈ ಕ್ಷಣವನ್ನು 'ಪೊಂಗಲೋ ಪೊಂಗಲ್' ಎಂದು ಕೂಗುವ ಮೂಲಕ ಆಚರಿಸುತ್ತಾರೆ.

More