ಬೆಂಗಳೂರು ಕಾಚರಕನಹಳ್ಳಿ ಕೋದಂಡರಾಮ ದೇವಸ್ಥಾನದಲ್ಲಿ ಏಷ್ಯಾದ ಅತಿ ಎತ್ತರದ ಆಂಜನೇಯನ ಪ್ರತಿಮೆ ಸ್ಥಾಪನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬೆಂಗಳೂರು ಕಾಚರಕನಹಳ್ಳಿ ಕೋದಂಡರಾಮ ದೇವಸ್ಥಾನದಲ್ಲಿ ಏಷ್ಯಾದ ಅತಿ ಎತ್ತರದ ಆಂಜನೇಯನ ಪ್ರತಿಮೆ ಸ್ಥಾಪನೆ

ಬೆಂಗಳೂರು ಕಾಚರಕನಹಳ್ಳಿ ಕೋದಂಡರಾಮ ದೇವಸ್ಥಾನದಲ್ಲಿ ಏಷ್ಯಾದ ಅತಿ ಎತ್ತರದ ಆಂಜನೇಯನ ಪ್ರತಿಮೆ ಸ್ಥಾಪನೆ

Jan 20, 2025 06:11 PM IST Rakshitha Sowmya
twitter
Jan 20, 2025 06:11 PM IST

ಉತ್ತರ ಬೆಂಗಳೂರಿನ ಎಚ್‌ಬಿಆರ್‌ ಲೇಔಟ್‌ನ ಕಾಚರಕನಹಳ್ಳಿಯ ಕೋದಂಡರಾಮ ದೇವಸ್ಥಾನದ ವಿಸ್ತಾರವಾದ ಆವರಣದಲ್ಲಿ 72 ಅಡಿ ಎತ್ತರದ ರಾಮ, ಲಕ್ಷ್ಮಣರ ಸಹಿತ ಹನುಮಂತನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದು ಏಷ್ಯಾದಲ್ಲೇ ಅತಿ ಎತ್ತರದ ಆಂಜನೇಯನ ಪ್ರತಿಮೆ ಎನಿಸಿದೆ. ಇದು 480 ಟನ್ ತೂಕವಿದ್ದು ಏಕಶಿಲೆಯಿಂದ ಮಾಡಲಾಗಿದೆ. ಈ ಏಕಶಿಲಾ ಹನುಮಂತನ ಪ್ರತಿಮೆ ಸ್ಥಾಪನೆಯನ್ನು ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್ 18 ಸ್ಥಳೀಯ ಗ್ರಾಮದ ನಿವಾಸಿಗಳ ಸಹಯೋಗದೊಂದಿಗೆ ಕೈಗೆತ್ತಿಕೊಂಡಿದೆ. ಇತ್ತೀಚೆಗೆ ಪ್ರತಿಮೆ ಲೋಕಾರ್ಪಣೆಗೊಂಡಿದ್ದು ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಸುಮಾರು 8 ತಿಂಗಳು ಸಮಯ ಬೇಕಿದೆ. ಕೋದಂಡರಾಮ ದೇವಾಲಯವು ಶ್ರೀಮಂತ ಇತಿಹಾಸವನ್ನು ಹೊಂದಿದೆ. ದೇವಸ್ಥಾನದಲ್ಲಿ ಬೃಹತ್ ಏಕಶಿಲೆಯ ಆಂಜನೇಯನ ಪ್ರತಿಮೆ ಸ್ಥಾಪಿಸುವುದು ಇಲ್ಲಿನ ಜನರ ಬಹುಕಾಲದ ಕನಸಾಗಿತ್ತು.ಇದೀಗ ಅವರ ಕನಸು ನನಸಾಗಿದೆ.

More