ಕಲಬುರಗಿ: ಜಿಮ್ಸ್ ಆಸ್ಪತ್ರೆ ಮಗು ಕಳ್ಳತನ ಪ್ರಕರಣ: 24 ಗಂಟೆಗಳಲ್ಲಿ ಕಿಡ್ನಾಪರ್‌ಗಳನ್ನು ಪತ್ತೆ ಹಚ್ಚಿ ಮಗುವನ್ನು ರಕ್ಷಿಸಿದ ಪೊಲೀಸರು
ಕಲಬುರಗಿ: ಆಸ್ಪತ್ರೆಗಳಲ್ಲಿ ಮಗು ಕಳ್ಳತನ, ಮಕ್ಕಳನ್ನು ಅದಲು ಬದಲು ಮಾಡುವ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದೆ. ಇದೀಗ ಮತ್ತೆ ಇಂಥದ್ದೇ ಘಟನೆ ನಡೆದಿದ್ದು ಪೊಲೀಸರು 24 ಗಂಟೆಗಳಲ್ಲಿ ಮಗು ಅಪಹರಿಸಿದವರನ್ನು ಬಂಧಿಸಿದ್ದು ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ನರ್ಸ್ ವೇಷ ಧರಿಸಿ ಬಂದ ಇಬ್ಬರು ಮಹಿಳೆಯರು ಆಗಷ್ಟೇ ಜನಿಸಿದ ಮಗುವನ್ನು ರಕ್ತ ಪರೀಕ್ಷೆ ನೆಪದಲ್ಲಿ ಕಿಡ್ನಾಪ್ ಮಾಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮಗುವನ್ನು ಕಿಡ್ನಾಪರ್‌ಗಳಿಂದ ರಕ್ಷಿಸಿ ತಾಯಿಗೆ ವಾಪಸ್ ನೀಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.