ಬಿಗ್‌ಬಾಸ್‌ ಕನ್ನಡ 11: ಅವರಿಗೆ ಕ್ಯಾಪ್ಟನ್‌ ಆಗೋ ಅರ್ಹತೆಯೇ ಇಲ್ಲ; ತ್ರಿವಿಕ್ರಮ್‌, ಐಶ್ವರ್ಯ ಶಿಂಧೋಗಿ ಫೋಟೋ ಹರಿದು ಹಾಕಿದ ಸಹ ಸ್ಪರ್ಧಿಗಳು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಅವರಿಗೆ ಕ್ಯಾಪ್ಟನ್‌ ಆಗೋ ಅರ್ಹತೆಯೇ ಇಲ್ಲ; ತ್ರಿವಿಕ್ರಮ್‌, ಐಶ್ವರ್ಯ ಶಿಂಧೋಗಿ ಫೋಟೋ ಹರಿದು ಹಾಕಿದ ಸಹ ಸ್ಪರ್ಧಿಗಳು

ಬಿಗ್‌ಬಾಸ್‌ ಕನ್ನಡ 11: ಅವರಿಗೆ ಕ್ಯಾಪ್ಟನ್‌ ಆಗೋ ಅರ್ಹತೆಯೇ ಇಲ್ಲ; ತ್ರಿವಿಕ್ರಮ್‌, ಐಶ್ವರ್ಯ ಶಿಂಧೋಗಿ ಫೋಟೋ ಹರಿದು ಹಾಕಿದ ಸಹ ಸ್ಪರ್ಧಿಗಳು

Published Oct 29, 2024 12:35 PM IST Rakshitha Sowmya
twitter
Published Oct 29, 2024 12:35 PM IST

ಬಿಗ್‌ಬಾಸ್‌ ಕನ್ನಡ 11 ಒಂದು ತಿಂಗಳು ಪೂರ್ಣಗೊಂಡಿದೆ. ಯಮುನಾ ಶ್ರೀನಿಧಿ, ಲಾಯರ್‌ ಜಗದೀಶ್‌, ರಂಜಿತ್‌, ಹಂಸ ನಾಲ್ವರೂ ಮನೆಯಿಂದ ಹೊರ ಹೋಗಿದ್ದಾರೆ. ಸ್ಪರ್ಧಿಗಳ ನಡುವೆ ಜಗಳ, ಮನಸ್ತಾಪ ಹೆಚ್ಚುತ್ತಲೇ ಇದೆ. ಇಂದು ಒಬ್ಬರ ಕಡೆ ಇದ್ದವರು ನಾಳೆ ಮತ್ತೊಬ್ಬರ ಗುಂಪು ಸೇರುತ್ತಿದ್ದಾರೆ. ಮನೆಯಲ್ಲಿ ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ನಡುವೆ ಮನಸ್ತಾಪ ಶುರುವಾಗಿದೆ. ಇಂದು ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಸ್ಪರ್ಧಿಗಳು ಹೋರಾಟ ಶುರು ಮಾಡಿದ್ದಾರೆ. ಕ್ಯಾಪ್ಟನ್‌ ಆಗಲು ಯಾರು ಅರ್ಹರಲ್ಲ ಎಂದು ಬಿಗ್‌ ಬಾಸ್‌ ಕೇಳಿದಾಗ ಕೆಲವು ಸ್ಪರ್ಧಿಗಳು ಐಶ್ಚರ್ಯ ಹಾಗೂ ಕೆಲವರು ವಿಕ್ರಮ್‌ ಫೋಟೋ ಹರಿದು ಕಸದ ಬುಟ್ಟಿಗೆ ಹಾಕಿ ಇವರು ಅರ್ಹರಲ್ಲ ಎಂದು ಹೇಳುತ್ತಾರೆ. ತ್ರಿವಿಕ್ರಮ್‌ ಹಾಗೂ ಐಶ್ವರ್ಯಾ ಇದೆಲ್ಲವನ್ನೂ ಮೌನದಿಂದ ನೋಡುತ್ತಾ ಕೂರುತ್ತಾರೆ.

More