ಬಿಗ್‌ಬಾಸ್‌ ಕನ್ನಡ 11: ಮನೆಯಲ್ಲಿ ಹನುಮಂತನ ಲುಂಗಿ ಬಗ್ಗೆ ಚರ್ಚೆ; ಹೇಗಿತ್ತು ಜೋಕ್‌ ಎಂದ ಬಿಗ್‌ಬಾಸ್‌ ಮಾತಿಗೆ ನಕ್ಕು ಸುಸ್ತಾದ ಸ್ಪರ್ಧಿಗಳು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಮನೆಯಲ್ಲಿ ಹನುಮಂತನ ಲುಂಗಿ ಬಗ್ಗೆ ಚರ್ಚೆ; ಹೇಗಿತ್ತು ಜೋಕ್‌ ಎಂದ ಬಿಗ್‌ಬಾಸ್‌ ಮಾತಿಗೆ ನಕ್ಕು ಸುಸ್ತಾದ ಸ್ಪರ್ಧಿಗಳು

ಬಿಗ್‌ಬಾಸ್‌ ಕನ್ನಡ 11: ಮನೆಯಲ್ಲಿ ಹನುಮಂತನ ಲುಂಗಿ ಬಗ್ಗೆ ಚರ್ಚೆ; ಹೇಗಿತ್ತು ಜೋಕ್‌ ಎಂದ ಬಿಗ್‌ಬಾಸ್‌ ಮಾತಿಗೆ ನಕ್ಕು ಸುಸ್ತಾದ ಸ್ಪರ್ಧಿಗಳು

Nov 08, 2024 01:41 PM IST Rakshitha Sowmya
twitter
Nov 08, 2024 01:41 PM IST

Bigg Boss Kannada 11: ಗುರುವಾರದ ಟಾಸ್ಕ್‌ ಮುಗಿಸಿ ಸಹ ಸ್ಪರ್ಧಿಗಳೊಂದಿಗೆ ಮನೆ ಒಳಗೆ ಬರುವ ಹನುಮಂತನೊಂದಿಗೆ ಬಿಗ್‌ಬಾಸ್‌ ಫನ್ನಿ ಮಾತುಕತೆ ಆರಂಭಿಸುತ್ತಾರೆ. ಇಂದಿಗೆ ನಿಮ್ಮ ಕ್ಯಾಪ್ಟನ್ಸಿ ಅವಧಿ ಮುಗಿಯಿತು. ನೀವು ಇಷ್ಟು ದಿನಗಳು ಕ್ಯಾಪ್ಟನ್‌ ರೂಮ್‌ ಬಳಸಲಿಲ್ಲ ಅಂತ ಆ ರೂಮ್‌ ಗೋಡೆಗಳು, ಮಂಚ ನಿಮ್ಮ ಬಗ್ಗೆ ಬೇಸರ ಮಾಡಿಕೊಂಡಿವೆ. ನೀವು ರೂಮ್‌ ಬಳಸದಿದ್ದರೂ ನಿಮ್ಮ ಲುಂಗಿಯನ್ನು ಅಲ್ಲಿ ಇಟ್ಟಿದ್ದಿರಿ, ಅದು ಈಗಲೂ ಅಲ್ಲೇ ಇದೆಯೇ ಎಂದು ಕೇಳುತ್ತಾರೆ. ಇಲ್ಲ, ಸುದೀಪ್‌ ಅವರು ಹೇಳಿದ ನಂತರ ಆ ರೂಮ್‌ಗೆ ಗೌರವ ಕೊಡುವ ಉದ್ಧೇಶದಿಂದ ಬೇರೆ ಕಡೆ ಇಟ್ಟಿರುವೆ ಎಂದು ಹನುಮಂತ ಹೇಳುತ್ತಾರೆ. ಒಳ್ಳೆಯದಾಯಿತು. ನಾನೆಲ್ಲೋ ಆ ಲುಂಗಿಯನ್ನು ಮುಂದೆ ಆ ರೂಮ್‌ ಬರುವ ಸಹಸ್ಪರ್ಧಿಗೆ ಉಡುಗೊರೆಯಾಗಿ ಕೊಡುವಿರೇನೋ ಎಂದುಕೊಂಡೆ ಎನ್ನುತ್ತಾರೆ. ಬಿಗ್‌ಬಾಸ್‌ ಮಾತಿಗೆ ಸ್ಪರ್ಧಿಗಳು ಜೋರಾಗಿ ನಗುತ್ತಾರೆ.

More