ಎಂಗೇಜ್ ಆದ್ರು ಗಿಣಿರಾಮನ ಸುಂದ್ರಿ ನಯನಾ ನಾಗರಾಜ್, ಮನೆಯಲ್ಲೇ ನಡೀತು ಸರಳ ನಿಶ್ಚಿತಾರ್ಥ VIDEO
- Nayana Nagaraj got Engaged: ಗಿಣಿರಾಮ ಧಾರಾವಾಹಿ ಮೂಲಕ ಗಮನ ಸೆಳೆದ ನಟಿ ನಯನಾ ನಾಗರಾಜ್ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಹುಕಾಲದ ಗೆಳೆಯ ಸುಹಾಸ್ ಶಿವಣ್ಣ ಜತೆಗೆ ಮನೆಯಲ್ಲಿಯೇ ಕುಟುಂಬದವರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡು ಎಂಗೇಜ್ ಆಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾಪ ಪಾಂಡು ಮತ್ತು ಗಿಣಿರಾಮ ಸೀರಿಯಲ್ ಮೂಲಕ ಪರಿಚಿತರಾಗಿದ್ದ ನಟಿ ನಯನಾ ನಾಗರಾಜ್, ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದ್ಧೂರಿ, ಆಡಂಬರದ ಬದಲು ಸರಳವಾಗಿ ಮನೆಯಲ್ಲಿಯೇ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಸುಹಾಸ್ ಶಿವಣ್ಣ ಜತೆಗೆ ಎಂಗೇಜ್‌ಮೆಂಟ್ ನೆರವೇರಿದೆ. ಇನ್ನು ಸುಹಾಸ್ ಶಿವಣ್ಣ ಬೆಂಗಳೂರಿನಲ್ಲಿ ವಾಸವಾಗಿದ್ದು, ರಂಗಭೂಮಿಯಲ್ಲೂ ತೊಡಗಿಸಿಕೊಂಡು, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸೋಷಿಯಲ್ ಮೀಡಿಯಾ ಸ್ಪೇಷಲಿಸ್ಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.