ಬಿಗ್‌ಬಾಸ್‌ ಕನ್ನಡ 11: ಮಾನಸಾ ಬಾಂಬ್‌ ಇದ್ದಂಗೆ, ಸುರೇಶ್‌ ಮಾವ ಕೋಳಿ ನಿದ್ರೆ ಮಾಡ್ತಾನೆ ಎಂದ ಸಿಂಗರ್‌ ಹನುಮಂತು ವಿರುದ್ಧ ಮನೆ ಮಂದಿ ಗರಂ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಮಾನಸಾ ಬಾಂಬ್‌ ಇದ್ದಂಗೆ, ಸುರೇಶ್‌ ಮಾವ ಕೋಳಿ ನಿದ್ರೆ ಮಾಡ್ತಾನೆ ಎಂದ ಸಿಂಗರ್‌ ಹನುಮಂತು ವಿರುದ್ಧ ಮನೆ ಮಂದಿ ಗರಂ

ಬಿಗ್‌ಬಾಸ್‌ ಕನ್ನಡ 11: ಮಾನಸಾ ಬಾಂಬ್‌ ಇದ್ದಂಗೆ, ಸುರೇಶ್‌ ಮಾವ ಕೋಳಿ ನಿದ್ರೆ ಮಾಡ್ತಾನೆ ಎಂದ ಸಿಂಗರ್‌ ಹನುಮಂತು ವಿರುದ್ಧ ಮನೆ ಮಂದಿ ಗರಂ

Oct 30, 2024 01:54 PM IST Rakshitha Sowmya
twitter
Oct 30, 2024 01:54 PM IST

ಬಿಗ್‌ಬಾಸ್‌ ಕನ್ನಡ 11: ಮನೆಯಲ್ಲಿ ಈ ಬಾರ ಹನುಮಂತು ಕ್ಯಾಪ್ಟನ್‌ ಅಗಿದ್ದಾನೆ. ಕ್ಯಾಪ್ಟನ್‌ ಆದವರಿಗೆ ಬಿಗ್‌ ಬಾಸ್‌ ವಿಶೇಷ ಹಕ್ಕನ್ನು ನೀಡಿದ್ದಾರೆ. ಅದರಂತೆ ಹನುಮಂತ ಕೆಲವರನ್ನು ನಾಮಿನೇಟ್‌ ಮಾಡಬೇಕಿತ್ತು. ಒಂದೊಂದೇ ಹೆಸರು ಹೇಳುವ ಹನುಮಂತ ಸುರೇಶ್‌ ಮಾವ ಅಲ್ಲಲ್ಲಿ ಕೋಳಿಯಂಗೆ ಮಲಗ್ತಾನೆ ಎನ್ನುತ್ತಾರೆ. ನಾನೊಬ್ಬನೇ ಮಲಗುತ್ತೀನಾ ಎಂದು ಸುರೇಶ್‌ ಕೇಳುತ್ತಾರೆ, ಇದಕ್ಕೆ ಉತ್ತರಿಸುವ ಹನುಮಂತು ನಾನು ಮಲಗುತ್ತೀನಿ, ನನ್ನ ಬಗ್ಗೆ ಹೇಳಲು ಕೇಳಿದಾಗ ನೀನೂ ಹೇಳಬಹುದು ಎನ್ನುತ್ತಾರೆ. ನಂತರ ಭವ್ಯ ಹೆಸರು ತೆಗೆದುಕೊಳ್ಳುವ ಹನುಮಂತು, ಅವರು ಟಾಸ್ಕ್‌ನಲ್ಲಿ ಸರಿಯಾಗಿ ಪಾಲ್ಗೊಳ್ಳುವುದಿಲ್ಲ ಎನ್ನುತ್ತಾರೆ. ಮಾನಸಾ ಬಾಂಬ್‌ ಇದ್ದಂಗೆ ಆದರೆ ಸಿಡಿಯಲು ಹೋಗಿ ಠುಸ್‌ ಆಗುತ್ತಾರೆ ಎನ್ನುತ್ತಾರೆ. ಹನುಮಂತು ನೀಡಿದ ಕಾರಣಗಳು ಮನೆ ಮಂದಿಗೆ ಇಷ್ಟವಾಗದೆ ಎಲ್ಲರೂ ಹನುಮಂತುವಿನ ಮೇಲೆ ಕೋಪಗೊಳ್ಳುತ್ತಾರೆ.

More