ಕನ್ನಡ ಸುದ್ದಿ  /  Video Gallery  /  Karnataka Congress Releases A Video Song Over Corruption Allegations Against Bjp Govt

Watch: ರಾಜ್ಯ ಬಿಜೆಪಿ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪದ ಕುರಿತು ಕಾಂಗ್ರೆಸ್​​ನಿಂದ ವಿಡಿಯೋ ಸಾಂಗ್​ ಬಿಡುಗಡೆ

Sep 13, 2022 06:45 PM IST Meghana B
twitter
Sep 13, 2022 06:45 PM IST
  • "ರಾಜ್ಯ ಆಳ್ತಿರೋದು - 40% ಸರ್ಕಾರ. ರಾಜ್ಯದ ಜನರ ಕಷ್ಟಕ್ಕೆ ಕಾರಣ- ಭ್ರಷ್ಟಾಚಾರ. ಭ್ರಷ್ಟ ಬಿಜೆಪಿ ಸರ್ಕಾರದ ಅಕ್ರಮಗಳು, ಹಗರಣಗಳು ಎಳೆದಷ್ಟೂ ಹೊರಬರುತ್ತವೆ. ಬಿಜೆಪಿ ಅಂದ್ರೆ ಭ್ರಷ್ಟಾಚಾರದ ಅಕ್ಷಯಪಾತ್ರೆ" ಎಂದು ಟ್ವೀಟ್​ ಮಾಡಿರುವ ಕರ್ನಾಟಕ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪದ ಕುರಿತು ವಿಡಿಯೋ ಸಾಂಗ್​ ಬಿಡುಗಡೆ ಮಾಡಿದೆ. ಪಿಎಸ್‌ಐ ನೇಮಕಾತಿ ಅಕ್ರಮ, ಶಿಕ್ಷಣ ಇಲಾಖೆಯಲ್ಲಿನ ಅಕ್ರಮ ಸೇರಿದಂತೆ ಬಿಜೆಪಿ ಮೇಲಿನ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳನ್ನು ಇಟ್ಟುಕೊಂಡು ಸಾಹಿತ್ಯ ರಚನೆ ಮಾಡಿ ಈ ಹಾಡನ್ನು ಸಿದ್ಧಪಡಿಸಲಾಗಿದೆ. ‘40% ಸರ್ಕಾರ- ಬಿಜೆಪಿ ಅಂದ್ರೆ ಭ್ರಷ್ಟಾಚಾರ’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್​ ಆರಂಭಿಸಿದೆ.
More