Kambala Festival: ಅನಾರೋಗ್ಯದಿಂದ ಬಳಲುತ್ತಿರುವ ಕಂಬಳದ ಬಾಹುಬಲಿ; ಓಟದಿಂದ ಕೋಣ ದೂಜ ನಿವೃತ್ತಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Kambala Festival: ಅನಾರೋಗ್ಯದಿಂದ ಬಳಲುತ್ತಿರುವ ಕಂಬಳದ ಬಾಹುಬಲಿ; ಓಟದಿಂದ ಕೋಣ ದೂಜ ನಿವೃತ್ತಿ

Kambala Festival: ಅನಾರೋಗ್ಯದಿಂದ ಬಳಲುತ್ತಿರುವ ಕಂಬಳದ ಬಾಹುಬಲಿ; ಓಟದಿಂದ ಕೋಣ ದೂಜ ನಿವೃತ್ತಿ

Published Feb 15, 2025 10:19 AM IST Praveen Chandra B
twitter
Published Feb 15, 2025 10:19 AM IST

  • ಕಂಬಳ ಕರೆಯಲ್ಲಿ ದೂಜ ಓಟಕ್ಕೆ ನಿಂತರೆ ಮೆಡಲ್ ಪಡೆದನೆಂದೇ ಲೆಕ್ಕ. ಅಂತಹ ದೂಜ ಅನಾರೋಗ್ಯದಿಂದ ಒಂದೆರಡು ವರ್ಷಗಳಿಂದ ಕಂಬಳ ಕರೆಗೆ ಇಳಿದಿಲ್ಲ. ಸದ್ಯ ಆರೋಗ್ಯದಿಂದಿದ್ದರೂ ಇನ್ನು ಮುಂದೆ ದೂಜ ಕಂಬಳ ಕರೆಗೆ ಇಳಿಯುವುದಿಲ್ಲ ಎಂಬ ಸುದ್ದಿ ಕಂಬಳ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಮಂಗಳೂರಿನ ಶಕ್ತಿನಗರ ಪದವು ಕಾನಡ್ಕದ ಯಜಮಾನರು ದೂಜನನ್ನು ಅಳದಂಗಡಿ ರವಿಯವರಿಂದ ಖರೀದಿಸಿದ್ದರು. ಪದವು ಕಾನಡ್ಕಕ್ಕೆ ಬರುವಾಗ 2 ವರ್ಷದ ಮರಿಕೋಣವಾಗಿದ್ದ ದೂಜನಿಗೆ ಇದೀಗ 16ರ ಪ್ರಾಯ. ಇಲ್ಲಿಗೆ ಬಂದ ಬಳಿಕವೇ ದೂಜ ಕಂಬಳಕ್ಕೆ ತಯಾರಾಗಿದ್ದು. ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜರ ಹೆಸರಿನಲ್ಲಿ ದೂಜನನ್ನು ಕಂಬಳ ಕರೆಯಲ್ಲಿ ಓಡಿಸಲಾಗುತ್ತಿತ್ತು. ತಂದೆ ಫ್ರಾನ್ಸಿಸ್‌ರ ನಿಧನದ ಬಳಿಕ ಮೂವರು ಮಕ್ಕಳಾದ ಡೋಲ್ಫಿ ಡಿಸೋಜ, ಡೆರಿಕ್ ಡಿಸೋಜ ಹಾಗೂ ನಾರ್ಬರ್ಟ್ ಡಿಸೋಜರು ತಾಯಿ ಫ್ಲೇವಿ ಡಿಸೋಜರ ಹೆಸರಿನಲ್ಲಿ ಕೋಣಗಳನ್ನು ಓಡಿಸುತ್ತಿದ್ದಾರೆ.

More