Lakshmi Hebbalkar: ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಗಿದ್ದಾರೆ, ಏನಾಗಿದೆ; ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Lakshmi Hebbalkar: ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಗಿದ್ದಾರೆ, ಏನಾಗಿದೆ; ವಿಡಿಯೋ

Lakshmi Hebbalkar: ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಗಿದ್ದಾರೆ, ಏನಾಗಿದೆ; ವಿಡಿಯೋ

Jan 14, 2025 04:02 PM IST Umesh Kumar S
twitter
Jan 14, 2025 04:02 PM IST

Lakshmi Hebbalkar Car Accident: ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಚರಿಸಿದ್ದ ಕಾರು ಇಂದು (ಜನವರಿ 14) ಮುಂಜಾನೆ 5 ಗಂಟೆ ಸುಮಾರಿಗೆ ಕಿತ್ತೂರು ಸಮೀಪ ಅಂಬಡಗಟ್ಟಿ ಎಂಬಲ್ಲಿ ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ ಕಾರು ಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಏರ್‌ಬ್ಯಾಗ್‌ಗಳು ಪೂರ್ಣ ತೆರೆದುಕೊಂಡಿವೆ. ಆದಾಗ್ಯೂ, ಅಪಘಾತದ ರಭಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬೆನ್ನು ಮೂಳೆಗೆ ಏಟು ಬಿದ್ದಿದೆ. ಒಂದು ತಿಂಗಳು ವಿಶ್ರಾಂತಿ ಪಡೆಯುವಂತೆ ಅವರಿಗೆ ಡಾಕ್ಟರ್ ಸೂಚಿಸಿದ್ದಾಗಿ ಆಪ್ತಮೂಲಗಳು ತಿಳಿಸಿವೆ. ನಾಯಿ ಅಡ್ಡ ಬಂದಾಗ ಅದನ್ನು ತಪ್ಪಿಸಲು ಹೋಗಿ ದುರಂತ ಸಂಭವಿಸಿದೆ. ಕಾರು ಚಾಲಕ ಹಾಗೂ ಗನ್ ಮ್ಯಾನ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳುಗಳಿಗೆ ಬೆಳಗಾವಿಯ ವಿಜಯ ಆಸ್ಪತ್ರೆಯ ಚಿಕಿತ್ಸೆ ನೀಡಲಾಗುತ್ತಿದೆ. 

ಹೆಚ್ಚಿನ ವಿವರಕ್ಕೆ - Kittur Car Accident: ಕಿತ್ತೂರು ಸಮೀಪ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ; ಸಚಿವೆ ಮತ್ತು ಅವರ ಸಹೋದರ ಆಸ್ಪತ್ರೆಗೆ ದಾಖಲು

 

More