ಹಾಸನ ನಗರಸಭೆ ಅಧಿಕಾರಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಕಿತ್ತಾಟ; ಮೈತ್ರಿಯಲ್ಲೇ ಗೊಂದಲ
- ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದ್ದರೂ, ಕೆಲವು ಜಿಲ್ಲೆಗಳಲ್ಲಿ ಉಭಯ ಪಾರ್ಟಿ ಕಾರ್ಯಕರ್ತರು ಹಾಗೂ ನಾಯಕರ ನಡುವೆ ಸಮನ್ವಯ ಇರಲಿಲ್ಲ ಎಂಬುದು ಸ್ಪಷ್ಟ. ಇದೀಗ ಹಾಸನ ನಗರಸಭೆ ಅಧಿಕಾರ ವಿಚಾರದಲ್ಲಿ ಎರಡೂ ಪಾರ್ಟಿ ನಡುವೆ ಮುನಿಸು ಉಂಟಾಗಿದ್ದು, ಜೆಡಿಎಸ್ ಮೈತ್ರಿ ಧರ್ಮ ಪಾಲಿಸಿಲ್ಲ ಎಂದು ಪ್ರೀತಂ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.