ರಾಜಮನೆತನದ ವಿರೋಧದ ನಡುವೆಯೂ ಚಾಮುಂಡೇಶ್ವರಿ ಪ್ರಾಧಿಕಾರ ಉದ್ಘಾಟನೆ
- ರಾಜ್ಯ ಸರ್ಕಾರ ಮತ್ತು ಮೈಸೂರು ರಾಜಮನೆತನದ ಜಟಾಪಟಿ ನಡುವೆಯೇ ಚಾಮುಂಡಿಬೆಟ್ಟ ಪ್ರಾಧಿಕಾರ ಉದ್ಘಾಟನೆಯಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಿತಿ ಉದ್ಘಾಟನೆಯಾಗಿದ್ದು, ಮೊದಲ ಸಭೆ ಜರುಗಿದೆ. ಕೋರ್ಟ್ ತಡೆಯಾಜ್ಞೆ ತೆರವು ಬಳಿಕ ಉದ್ಘಾಟನೆಯಾಗಿದ್ದು, ರಾಜಮನೆತನ ವಿರೋಧ ವ್ಯಕ್ತಪಡಿಸಿದೆ. ಉದ್ಘಾಟನೆಗೂ ಮೊದಲು ಸಿಎಂ ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು.