ತುಂಗಾಭದ್ರಾ ಜಲಾಶಯದಲ್ಲಿ ಸಾಧ್ಯವಾದಷ್ಟು ನೀರು ಉಳಿಸಿಕೊಂಡು ರಿಪೇರಿ ಕಾಮಗಾರಿ: ಡಿಕೆ ಶಿವಕುಮಾರ್
- ತುಂಗಭದ್ರ ಜಲಾಶಯದಲ್ಲಿ ಹಾನಿಯಾಗಿರುವ ಗೇಟ್ ರಿಪೇರಿಗೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದ್ದು, ತಜ್ಞರು ಕಾರ್ಯಾರಂಭ ಮಾಡಿದ್ದಾರೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಡ್ಯಾಂನಲ್ಲಿ ಸಾಧ್ಯವಾದಷ್ಟು ನೀರನ್ನು ಹಿಡಿದಿಟ್ಟುಕೊಂಡೇ ರಿಪೇರಿ ಕೆಲಸಗಳನ್ನ ಮಾಡಲು ಯೋಚಿಸಿದ್ದು, ತಜ್ಞರೂ ಇದಕ್ಕೆ ಯೋಜನೆ ರೂಪಿಸಿದ್ದಾರೆ ಎಂದರು.