ಮೈಸೂರು ದಸರಾ ಜಂಬೂ ಸವಾರಿ; ಅಭಿಮನ್ಯು ನೇತೃತ್ವದಲ್ಲಿ ಗಜಪಡೆಯ ಗಾಂಭೀರ್ಯ ನಡಿಗೆ
- ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಅಂಬಾರಿಯಲ್ಲಿ ಭಾಗವಹಿಸುವ ಆನೆಗಳು ನಾಗರಹೊಳೆಯ ವೀರನಹೊಸಳ್ಳಿಯಿಂದ ಹೊರಟಿದ್ದು, 414ನೇ ಜಂಬೂ ಸವಾರಿಯಲ್ಲಿ ಭಾಗವಹಿಸಲಿವೆ. ಕ್ಯಾಪ್ಟನ್ ಅಭಿಮನ್ಯು ಈ ಬಾರಿ ಅಂಬಾರಿ ಹೊರಲಿದ್ದು, ಇತರೆ 9 ಆನೆಗಳು ಸಾಥ್ ನೀಡಲಿವೆ. ಕಾಡಿನಿಂದ ಮೈಸೂರಿಗೆ ಹೊರಡುವ ಮೊದಲು ಆನೆಗಳಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯ್ತು.