Mysuru Dasara 2024: ದಸರಾ ಆನೆಗಳಿಗೆ ಸ್ಪೆಷಲ್ ಫುಡ್; ವಿಶೇಷ ಆಹಾರ ತಯಾರಿಸುವ ವಿಧಾನ ಹೇಗಿರುತ್ತೆ ನೋಡಿದ್ದೀರಾ? VIDEO
- ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಆನೆಗಳಿಗೆ ವಿಶೇಷ ಆಹಾರ ತಯಾರಿಸಿ ನೀಡಲಾಗುತ್ತಿದೆ. ಆನೆಗಳ ತೂಕ ಹೆಚ್ಚಿಸಲು ಮತ್ತು ಅವುಗಳ ಆರೋಗ್ಯದ ಹಿತದೃಷ್ಟಿಯಿಂದ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ವಿವಿಧ ಬಗೆಯ ಧಾನ್ಯಗಳನ್ನು ಬೇಯಿಸಿ ಅದಕ್ಕೆ ತರಕಾರಿಗಳನ್ನು ಮಿಶ್ರಣ ಮಾಡಿ ಪ್ರತಿನಿತ್ಯ 2 ಬಾರಿ ನೀಡಲಾಗುತ್ತಿದೆ. ಪ್ರತಿನಿತ್ಯ ಬೆಳಿಗ್ಗೆ 7 ಗಂಟೆಗೆ ಹಾಗು ಸಂಜೆ 7 ಗಂಟೆಗೆ ವಿಶೇಷ ಆಹಾರ ನೀಡಲಾಗುತ್ತಿದೆ. ಜೊತೆಗೆ ಹಸಿರು ಹುಲ್ಲು, ಆಲದಮರದ ಸೊಪ್ಪು, ಒಣ ಹುಲ್ಲು, ಕುಸುರೆಯನ್ನು ನೀಡಲಾಗುತ್ತಿದೆ. ಪ್ರತಿ ನಿತ್ಯ ಒಂದು ಗಂಡು ಆನೆಗೆ 650 ರಿಂದ 750 ಕೆಜಿ ಆಹಾರ ಕೊಡಲಾಗುತ್ತಿದೆ. ಹೆಣ್ಣು ಆನೆಗೆ 450 ರಿಂದ 500 ಕೆಜಿ ಆಹಾರ ಕೊಡಲಾಗುತ್ತಿದೆ. ಒಂದು ಆನೆಗೆ ಪ್ರತಿನಿತ್ಯ 6 ರಿಂದ 7 ಕೆಜಿ ಪ್ರೋಟಿನ್ ಯುಕ್ತ ಆಹಾರ ಕೊಡಲಾಗುತ್ತಿದೆ. ನಾಡ ಹಬ್ಬ ದಸರೆಗೆ ಮೆರುಗು ತರುವ ಆನೆಗಳಿಗೆ ವಿಶೇಷ ಆಹಾರ ನೀಡಲಾಗುತ್ತಿದೆ. ಭತ್ತ, ಗೋಧಿ, ಬೇಳೆ, ಬೆಲ್ಲ, ತರಕಾರಿ, ಬೆಣ್ಣೆ ಮಿಶ್ರಿತ ಆಹಾರ ನೀಡಲಾಗುತ್ತಿದೆ. ಮಾವುತರು ಕಾವಾಡಿಗಳು ನೀಡುವ ವಿಶೇಷ ಆಹಾರವನ್ನು ಆನೆಗಳು ಸವಿಯುವ ದೃಶ್ಯ ಗಮನ ಸೆಳೆಯುತ್ತಿದೆ.