ಸರ್ಕಾರದ ಯೋಜನೆ ದುಡ್ಡಲ್ಲಿ ಊರಿಗೆ ಹೋಳಿಗೆ ಊಟ; ಅಜ್ಜಿ ಜೊತೆ ಸಚಿವೆ ಹೆಬ್ಬಾಳ್ಕರ್ ಖುಷಿಯ ಮಾತು
- ಕರ್ನಾಟಕ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಅದೆಷ್ಟೋ ಬಡವರಿಗೆ ಸಹಾಯವಾಗಿದೆ. ಕೆಲವರು ಈ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಸುವ ಮೂಲಕ ನೆರವಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಜ್ಜಿಯೊಬ್ಬರು ಗೃಹಲಕ್ಷ್ಮೀ ಯೋಜನೆಯ ಹಣ ಕೂಡಿಟ್ಟು ಅದರಲ್ಲಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ. ಈ ಅಜ್ಜಿ ಜೊತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ ವಿಡಿಯೋ ವೈರಲ್ ಆಗಿದೆ.