ಆಟಿಡೊಂಜಿ ದಿನ ಕಾರ್ಯಕ್ರಮದ ನೃತ್ಯದಲ್ಲಿ ದೈವಕ್ಕೆ ಅವಮಾನವಾಗಿಲ್ಲ; ಆಯೋಜಕರ ಸ್ಪಷ್ಟನೆ
- ಮಂಗಳೂರಿನಲ್ಲಿ ಮಹಿಳೆಯೊಬ್ಬರು ದೈವನರ್ತನ ಅನುಕರಣೆ ಮಾಡಿದ ವಿಡಿಯೋ ಸದ್ದು ಮಾಡಿದೆ. ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ವಿವಾದ ನಡೆದಿದ್ದು, ತುಳುನಾಡಿನಲ್ಲಿ ಆಕ್ಷೇಪಗಳು ವ್ಯಕ್ತವಾದ ಬೆನ್ನಲ್ಲೇ ಆಯೋಜಕರು ಸ್ಪಷ್ಟನೆ ನೀಡಿದ್ದಾರೆ. ದೈವನರ್ತನ ಅನುಕರಣೆ ಮಾಡಿದ್ದರಲ್ಲಿ ತಪ್ಪಿಲ್ಲ. ಅವರು ಭಕ್ತಿಯಿಂದ ನರ್ತಿಸಿದ್ದೇ ಹೊರತು, ಅವಮಾನ ಮಾಡಿಲ್ಲ ಎಂದು ಸಮರ್ಥಿಸಿದ್ದಾರೆ.