ಸಣ್ಣ ಕೆಲಸಕ್ಕೂ ನಿಮಗೆ ಕೋಟಿಯಲ್ಲೇ ಬೇಕಾ? ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇ ಗೌಡ ಕ್ಲಾಸ್ VIDEO
- ನಂಜನಗೂಡಿನಲ್ಲಿ ನೆರೆ ಪರಿಸ್ಥಿತಿ ನಿಯಂತ್ರಿಸಲು ವೈಜ್ಞಾನಿಕ ವಿಧಾನ ಅನುಸರಿಸದ ಅಧಿಕಾರಿಗಳನ್ನು ಸಚಿವ ಕೃಷ್ಣ ಭೈರೇ ಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. ನಂಜನಗೂಡಿನ ಕಪಿಲ ನದಿಯ ದಡದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು ಅಧಿಕಾರಿಗಳ ಬಳಿ ಯೋಜನೆಗಳನ್ನ ವಿವರಿಸುವಂತೆ ಸೂಚಿಸಿದ್ದಾರೆ. ಆದರೆ ಸಣ್ಣ ಕೆಲಸಕ್ಕೂ ದೊಡ್ಡದಾಗಿ ವಿವರಿಸಿದ ಅಧಿಕಾರಗಳ ನಡೆಗೆ ಅಸಮಧಾನ ವ್ಯಕ್ತಪಡಿಸಿದ ಸಚಿವರು ತಾವೇ ವಿವರಿಸಿದ್ದಾರೆ. ಬಳಿಕ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ಸಂತ್ರಸ್ತರ ಯೋಗಕ್ಷೇಮವನ್ನ ವಿಚಾರಿಸಿದ್ದಾರೆ.