ಡ್ರಾಮಾ ನೋಡೋಕೆ ಬರ್ತಿರಾ ಇಲ್ಲಿ.. ಕಂದಾಯ ಸಚಿವ ಕೃಷ್ಣ ಭೈರೇಗೌಡರ ಪ್ರಶ್ನೆಗೆ ತಹಶೀಲ್ದಾರ್ ತಬ್ಬಿಬ್ಬು VIDEO
- ಏನ್ ಡ್ರಾಮಾ ನೋಡೋಕ್ ಬಂದಿದಿರಾ? ಜಿಲ್ಲೆಯಲ್ಲಿ 2832 RTC Mismatch ಕೇಸ್ ಇದ್ದು ಯಾವಾಗ ಮಾಡ್ತೀರ ಹೇಳಿ ಎಂದು ಬೆಂಗಳೂರು ಗ್ರಾಮೀಣ ಜಿಲ್ಲೆಯ ತಹಶೀಲ್ದಾರರನ್ನು ಸಚಿವ ಕೃಷ್ಣ ಭೈರೇಗೌಡರು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮೀಣ ಜಿಲ್ಲೆಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಜನರ ಕೆಲಸ ಮಾಡದಿರಲು ನೆಪ ಹುಡುಕುವುದನ್ನು ಬಿಟ್ಟು, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜನಸೇವೆ ಮಾಡಬೇಕು. ಪೋಡಿ ದುರಸ್ಥಿ ಅಭಿಯಾನಕ್ಕೆ ವೇಗ ತುಂಬಬೇಕು, ಸರ್ಕಾರಿ ಜಮೀನು ಒತ್ತುವರಿ ತೆರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.