ಮೂಡಬಿದ್ರಿಯ ಹೊಸಂಗಡಿಯಲ್ಲಿ ದೇವಸ್ಥಾನದೊಳಗೆ ಸಿಲುಕಿದ್ದ ಅರ್ಚಕರಿಗೆ ಮುಸ್ಲಿಂ ಯುವಕರ ಸಹಾಯ
- ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರಿಯ ಮರೂರು ಹೊಸಂಗಡಿಯಲ್ಲಿನ ದೇವಸ್ಥಾನದ ಒಳಗೆ ಸಿಕ್ಕಿ ಸಂಕಷ್ಟದಲ್ಲಿದ್ದ ದೇವಸ್ಥಾನದ ಅರ್ಚಕರಿಗೆ ಸ್ಥಳೀಯ ಮುಸ್ಲಿಂ ಯುವಕರು ಆಸರೆಯಾಗಿದ್ದಾರೆ. ಭಾರಿ ಮಳೆಯಿಂದಾಗಿ ನೀರಿನ ಪ್ರಮಾಣ ಏಕಾಏಕಿ ಏರಿಕೆಯಾಗಿದ್ದು, ಅರ್ಚಕರು ದೇವಸ್ಥಾನದಲ್ಲೇ ಸಿಲುಕಿದ್ದರು. ಈ ವೇಳೆ ಸಹಾಯಕ್ಕೆ ಧಾವಿಸಿದ ಮುಸ್ಲಿಂ ಯುವಕರ ತಂಡ ಅರ್ಚಕರನ್ನು ರಕ್ಷಿಸಿದೆ.