ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಪೋಷಕರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಪೋಷಕರು

ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಪೋಷಕರು

Published Sep 14, 2023 12:40 PM IST HT Kannada Desk
twitter
Published Sep 14, 2023 12:40 PM IST

ಬ್ರಿಟನ್‌ ಪ್ರಧಾನಿ, ಇನ್ಫೋಸಿಸ್‌ ಮುಖ್ಯಸ್ಥರಾದ ನಾರಾಯಣ ಮೂರ್ತಿ-ಸುಧಾಮೂರ್ತಿಯವರ ಅಳಿಯ ರಿಷಿ ಸುನಕ್‌ ತಂದೆ ತಾಯಿ ಬುಧವಾರ (ಸೆ.13) ರಂದು ಮಂತ್ರಾಲಯಕ್ಕೆ ತೆರಳಿ ಗುರುರಾಯರ ದರ್ಶನ ಪಡೆದಿದ್ದಾರೆ. ರಿಷಿ ಸುನಕ್‌ ತಂದೆ ಯಶವೀರ್‌ ಸುನಕ್‌ ತಾಯಿ ಉಷಾ ಸುನಕ್‌ ಜೊತೆ ಸುಧಾ ಮೂರ್ತಿಯವರೂ ಆಗಮಿಸಿದ್ದರು. ಮೊದಲು ಶ್ರೀ ಮಂಚಾಲಮ್ಮ ದೇವಿಯ ದರ್ಶನ ಪಡೆದು ನಂತರ ಮೂಲ ಬೃಂದಾವನ ದರ್ಶನ ಪಡೆದು ವಿಶೇಷ ಪೂಜೆ ನೇರವೇರಿಸಿದರು. ನಂತರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ರಿಷಿ ಸುನಕ್ ತಂದೆ ತಾಯಿ, ಸುಧಾಮೂರ್ತಿಯವರಿಗೆ ವಸ್ತ್ರ, ಫಲ, ಮಂತ್ರಾಕ್ಷತೆ ಹಾಗೂ ಸ್ಮರಣಿಕೆ ನೀಡಿ ಆಶೀರ್ವದಿಸಿದರು.

More