ಚಾರ್ಮಾಡಿ ಘಾಟ್‌ನಲ್ಲಿ ವಾಹನ ಸವಾರರ ಸಂಕಷ್ಟ; ರಸ್ತೆಯಲ್ಲಿ ಕಾಲುವೆಯಂತೆ ತುಂಬಿದ ಕೆಸರು ನೀರು
ರಾಜ್ಯದ ಹಲವೆಡೆ ಕಳೆದ ಒಂದು ತಿಂಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರಿನಲ್ಲಿ ಕೂಡಾ ಹೆಚ್ಚು ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನಿಂದ ಆರಂಭವಾಗಿ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಕೊನೆಯಾಗುವ ಘಟ್ಟ ಪ್ರದೇಶವಾದ ಚಾರ್ಮಾಡಿ ಘಾಟ್‌ನಲ್ಲಿ ಕೂಡಾ ಕಳೆದ 2 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಪ್ರಯಾಣಿಕರು ಭಯದಿಂದಲೇ ಪ್ರಯಾಣಿಸುತ್ತಿದ್ದಾರೆ. ಘಾಟ್‌ನ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಕೆಸರು ನೀರು ಹರಿದು ಬರುತ್ತಿದೆ. ಯಾವ ವಾಹನಗಳು ಸಂಚರಿಸಲು ಆಗದಷ್ಟೂ ನೀರು ತುಂಬಿದ್ದು ಇದು 2019ರ ಘಟನೆಯನ್ನು ನೆನಪಿಸುತ್ತಿದೆ.