ವಿಕ್ರಂ ಗೌಡ ಶೂಟೌಟ್‌ ನಂತರ ಹೆಬ್ರಿ ಕಾಡಂಚಿನ ಗ್ರಾಮಗಳಲ್ಲಿ ಚುರುಕುಗೊಂಡ ಕೂಂಬಿಂಗ್‌; ತಪ್ಪಿಸಿಕೊಂಡ ನಕ್ಸಲರಿಗಾಗಿ ಶೋಧ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ವಿಕ್ರಂ ಗೌಡ ಶೂಟೌಟ್‌ ನಂತರ ಹೆಬ್ರಿ ಕಾಡಂಚಿನ ಗ್ರಾಮಗಳಲ್ಲಿ ಚುರುಕುಗೊಂಡ ಕೂಂಬಿಂಗ್‌; ತಪ್ಪಿಸಿಕೊಂಡ ನಕ್ಸಲರಿಗಾಗಿ ಶೋಧ

ವಿಕ್ರಂ ಗೌಡ ಶೂಟೌಟ್‌ ನಂತರ ಹೆಬ್ರಿ ಕಾಡಂಚಿನ ಗ್ರಾಮಗಳಲ್ಲಿ ಚುರುಕುಗೊಂಡ ಕೂಂಬಿಂಗ್‌; ತಪ್ಪಿಸಿಕೊಂಡ ನಕ್ಸಲರಿಗಾಗಿ ಶೋಧ

Nov 20, 2024 05:12 PM IST Rakshitha Sowmya
twitter
Nov 20, 2024 05:12 PM IST

ಉಡುಪಿ ಜಿಲ್ಲೆಯ ಹೆಬ್ರಿ ಬಳಿ ನಕ್ಸಲ್‌ ನಾಯಕ ವಿಕ್ರಂ ಗೌಡ ಶೂಟೌಟ್‌ ನಂತರ ಕೂಂಬಿಂಗ್‌ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಂಡಿದೆ. ಕಾಡಂಚಿನ ಗ್ರಾಮಗಳಲ್ಲಿ ಬೀಡ ಬಿಟ್ಟಿರುವ ಪೊಲೀಸರು ತಪ್ಪಿಸಿಕೊಂಡಿರುವ ಉಳಿದ ನಕ್ಸಲರಿಗಾಗಿ ಶೋಧ ಮುಂದುವರೆಸಿದೆ. ನಕ್ಸಲ್‌ ನಾಯಕಿಯರಾದ ಸುಂದರಿ, ವನಜಾಕ್ಷಿಯನ್ನು ಹಿಡಿಯಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ. ಸೋಮವಾರ ರಾತ್ರಿ ಸುಮಾರು 12:15ಕ್ಕೆ ತಮ್ಮ ಸಹಚರರೊಂದಿಗೆ ವಿಕ್ರಂಗೌಡ ರೇಷನ್‌ ತರಲು ಗ್ರಾಮದೊಳಗೆ ಬಂದಿದ್ದಾರೆ. ಈ ಸಮಯದಲ್ಲಿ ಕಾದು ಕುಳಿತಿದ್ದ ಎಎನ್​ಎಫ್ ತಂಡ ವಿಕ್ರಂ ಗೌಡನನ್ನು ಶರಣಾಗುವಂತೆ ಕೇಳಿದೆ. ಅದಕ್ಕೆ ಒಪ್ಪದ ವಿಕ್ರಂ ಗೌಡ ಪೊಲೀಸರ ಮೇಲೆ ಗುಂಡು ಹಾರಿಸಲು ಮುಂದಾದಾಗ, ಎಎನ್​ಎಫ್ ಸಿಬ್ಬಂದಿ ಆತ್ಮ ರಕ್ಷಣೆಗಾಗಿ ವಿಕ್ರಂ ಗೌಡನತ್ತ ಗುಂಡು ಹಾರಿಸಿದ್ದಾರೆ.

More