ಗ್ಯಾರಂಟಿ ಯೋಜನೆಗಳು ಕದ್ದು ಮುಚ್ಚಿ ಮಾಡಿರುವುದಲ್ಲ, ಚುನಾವಣೆ ಪ್ರಣಾಳಿಕೆಯಲ್ಲಿ ಇದ್ದದ್ದು; ಗೃಹ ಸಚಿವ ಜಿ ಪರಮೇಶ್ವರ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಗ್ಯಾರಂಟಿ ಯೋಜನೆಗಳು ಕದ್ದು ಮುಚ್ಚಿ ಮಾಡಿರುವುದಲ್ಲ, ಚುನಾವಣೆ ಪ್ರಣಾಳಿಕೆಯಲ್ಲಿ ಇದ್ದದ್ದು; ಗೃಹ ಸಚಿವ ಜಿ ಪರಮೇಶ್ವರ್‌

ಗ್ಯಾರಂಟಿ ಯೋಜನೆಗಳು ಕದ್ದು ಮುಚ್ಚಿ ಮಾಡಿರುವುದಲ್ಲ, ಚುನಾವಣೆ ಪ್ರಣಾಳಿಕೆಯಲ್ಲಿ ಇದ್ದದ್ದು; ಗೃಹ ಸಚಿವ ಜಿ ಪರಮೇಶ್ವರ್‌

Nov 27, 2024 04:49 PM IST Rakshitha Sowmya
twitter
Nov 27, 2024 04:49 PM IST

ಕಾಂಗ್ರೆಸ್‌ ಸರ್ಕಾರ ಅಧಿಕಾರ ಸ್ವೀಕರಿಸಿದ ನಂತರ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಿದೆ. ಆದರೆ ಈ ಬಗ್ಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ಕಾಂಗ್ರೆಸ್ ಶಾಸಕ ಹೆಚ್‌ಆರ್‌ ಗವಿಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಕ್ಕೆ ಬರುವ ಅನುದಾನ ಕಡಿಮೆ ಆಗುತ್ತಿದೆ. ಆದ್ದರಿಂದ ಸರ್ಕಾರ ಶಕ್ತಿ ಯೋಜನೆ ಸೇರಿದಂತೆ ಇನ್ನೆರಡು ಗ್ಯಾರಂಟಿಗಳನ್ನು ಕೈ ಬಿಡುವಂತೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡುತ್ತೇವೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ ಪರಮೇಶ್ವರ್‌, ಅವರವರ ಅಭಿಪ್ರಾಯ ಹೇಳ್ತಾರೆ. ಸರ್ಕಾರ ಮತ್ತು ಪಕ್ಷ ನಿರ್ಧಾರ ತೆಗೆದುಕೊಂಡಿದೆ. ಗ್ಯಾರಂಟಿ ಯೋಜನೆಗಳನ್ನು ಕದ್ದುಮುಚ್ಚಿ ಮಾಡಿದ್ದು ಅಲ್ಲ, ಚುನಾವಣೆ ಪ್ರಣಾಳಿಕೆಯಲ್ಲೇ ಹೇಳಿದ್ದೇವೆ. ಅದನ್ನ ನಂಬಿಕೊಂಡೇ ಜನ ನಮಗೆ ಮತ ಹಾಕಿದ್ದಾರೆ. ಅನುದಾನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ, ಎಲ್ಲವನ್ನು ಬ್ಯಾಲೆನ್ಸ್‌ ಮಾಡಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

More